![Moving Image: Video of Photographer Hit By Cyclist While Capturing Marriage Proposal Goes Viral](https://images.news18.com/ibnlive/uploads/2020/09/1601031379_untitled-design-2020-09-25t162418.313.png?impolicy=website&width=534&height=356)
ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ ಸನ್ನಿವೇಶ ಸೆರೆಹಿಡಿಯಲು ಹೋದ ಛಾಯಾಗ್ರಾಹಕಿ ಎಡವಟ್ಟು ಮಾಡಿಕೊಂಡಿದ್ದಾಳೆ.
ಪ್ರೇಮ ನಿವೇದನೆ ಪ್ರಸಂಗವು ಅವಿಸ್ಮರಣೀಯ ಆಗಿರಬೇಕೆಂಬ ಕಾರಣಕ್ಕೆ ಕ್ರಿಸ್ ವಿಗೋ, ಪ್ರತಿ ಕ್ಷಣವನ್ನು ಸೆರೆಹಿಡಿಯಲು ಸ್ನೇಹಿತರಿಗೆ ಛಾಯಾಗ್ರಹಣ ಮಾಡಲು ಹೇಳಿದ್ದ.
ಏಂಜೆಲಿನಾ ರಿವೇರಾಗೆ ಲವ್ ಪ್ರಪೋಸ್ ಮಾಡಲು ಕ್ರಿಸ್ ಆಯ್ಕೆ ಮಾಡಿಕೊಂಡಿದ್ದು ಅಮೆರಿಕಾದ ನ್ಯೂಯಾರ್ಕ್ ನಲ್ಲಿನ ಬ್ರೂಕ್ಲಿನ್ ಸೇತುವೆ. ರಸ್ತೆಬದಿ ಏಂಜೆಲಿನಾ ಎದುರು ಮಂಡಿಯೂರಿ ಕುಳಿತ ಕ್ರಿಸ್, ಆಕೆಯ ಕೈಹಿಡಿದು ಪ್ರೇಮ ನಿವೇದಿಸಿಕೊಳ್ಳುತ್ತಿದ್ದ.
ಪಕ್ಕದಲ್ಲೇ ಸೈಕಲ್ ಪಥ ಇದ್ದುದರಿಂದ ಹತ್ತಾರು ಸೈಕಲ್ ಗಳು ಸಂಚರಿಸುತ್ತಿದ್ದವಲ್ಲದೆ, ಅಡಚಣೆ ಎನಿಸುತ್ತಲೂ ಇದೆ. ಆದರೂ ಪ್ರಪೋಸ್ ಮಾಡುತ್ತಿದ್ದ ಈ ಜೋಡಿಯನ್ನು ಸೆರೆ ಹಿಡಿಯಲು ಗೆಳತಿ ಕಂ ಛಾಯಾಗ್ರಾಹಕಿ ಜೋಶುವಾ ರೋಸಾ ರಿಯೊ ಹರಸಾಹಸಪಡುತ್ತಿದ್ದಳು.
ಉತ್ತಮ ಫ್ರೇಮ್ ಗಾಗಿ ಒದ್ದಾಡುತ್ತಿದ್ದ ಜೋಶುವಾ, ಕ್ಯಾಮರಾದ ಲೆನ್ಸ್ ಕಾರ್ಟ್ ನೊಳಗೆ ಕಣ್ಣಿಟ್ಟು, ಜೋಶ್ ನಲ್ಲಿ ಮುಂದೆ ಬಂದುಬಿಟ್ಟಳು. ವೇಗವಾಗಿ ಬರುತ್ತಿದ್ದ ಸೈಕಲ್ ಗುದ್ದಿ, ಸೈಕಲ್ ಸವಾರ ಮಗುಚಿ ಬಿದ್ದ.
ಸಾವರಿಸಿಕೊಂಡ ಕ್ರಿಸ್ – ಏಂಜೆಲಿನಾ ಜೋಡಿ ಕೊನೆಗೂ ಪರಸ್ಪರ ಪ್ರೀತಿ ಒಪ್ಪಿಕೊಂಡರು. ಈ ವಿಡಿಯೋ ನಗೆ ತರಿಸುವಂತಿದ್ದು, ವೈರಲ್ ಆಗಿದೆ.
https://www.instagram.com/p/CFcNTDXhy7P/?utm_source=ig_web_copy_link