ನಾಯಿ ಮರಿ ಯಾರಿಗೆ ಇಷ್ಟವಿಲ್ಲ ಹೇಳಿ. ಅಮ್ಮ ಮನೆಗೆ ನಾಯಿ ಮರಿ ತಂದಿದ್ದನ್ನು ನೋಡಿ, ಖುಷಿ ತಡೆಯಲಾಗದೇ ಬಾಲಕ ಬಿಕ್ಕಿ ಬಿಕ್ಕಿ ಅತ್ತ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸಿಮೋನ್ ಬಿ.ಆರ್.ಎಫ್.ಸಿ. ಹಾಪ್ಕಿನ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿದ್ದು, 52 ಸೆಕೆಂಡ್ ನ ಕ್ಲಿಪ್ 7.2 ಸಾವಿರ ವೀಕ್ಷಣೆ ಪಡೆದಿದೆ. ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
ನಾವೊಂದು ನಾಯಿ ಮರಿ ಸಾಕೋಣ ಎಂದು ಬಾಲಕ ಹೇಳುತ್ತಿದ್ದ. ಆತನ ಅಮ್ಮ ಒಂದು ದಿನ ನಾಯಿ ಮರಿಯನ್ನು ಮನೆಗೆ ತಂದಿದ್ದರು. ಸೋಫಾದ ಮೇಲೆ ಕುಳಿತು ವಿಡಿಯೋ ಗೇಮ್ ಆಡುತ್ತಿದ್ದ ಬಾಲಕನಿಗೆ ನಾಯಿ ಮರಿ ನೋಡಿ ಅಚ್ಚರಿ ತಡೆಯಲಾಗಲಿಲ್ಲ. ಖುಷಿಯಲ್ಲಿ ಆತನಿಗೆ ಅಳು ಬಂತು. ನಾಯಿ ಮರಿ ಆತನನ್ನು ಸಂತೈಸುವಂತೆ ಮೈಮೇಲೆ ಹತ್ತಿ ಮುಖ ನೆಕ್ಕಿ ಮುದ್ದು ಮಾಡುತ್ತದೆ.
https://twitter.com/HopkinsBRFC/status/1308713946728329217?ref_src=twsrc%5Etfw%7Ctwcamp%5Etweetembed%7Ctwterm%5E1308713946728329217%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fmother-surprising-son-with-puppy-is-the-purest-content-on-the-internet-2908997.html