
ಕೆಲವೊಮ್ಮೆ ಮನೆಯ ಮುಖ್ಯದ್ವಾರಕ್ಕೆ ಅಳವಡಿಸಿದ ಆಟೋಮ್ಯಾಟಿಕ್ ಲಾಕಿಂಗ್ ವ್ಯವಸ್ಥೆಯ ಕಾರಣದಿಂದ ಅಚಾನಕ್ಕಾಗಿ ಲಾಕ್ ಡೌನ್ ಆಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಇಂಥ ಪರಿಸ್ಥಿತಿಗಳಿಗೆಂದೇ ಯಾವಾಗಲೂ ಒಂದು ನಕಲಿ ಕೀ ಹೊಂದಿರುವುದು ಅನಿವಾರ್ಯವಾಗುತ್ತದೆ.
ಅದರೆ ಇಲ್ಲೊಂದು ವಿಚಿತ್ರ ಕಾರಣಕ್ಕೆ ಸ್ಕಾಟ್ಲೆಂಡ್‌ನ ಅಮ್ಮ-ಮಗ ಮನೆಯಲ್ಲಿ ಲಾಕ್ ಅಪ್ ಆಗಿದ್ದಾರೆ. ಹೊಸ ಸೋಫಾ ಸೆಟ್‌ಗಳ ಡೆಲಿವರಿ ಮಾಡಿದ ಸಿಬ್ಬಂದಿ ಈ ಅಮ್ಮ-ಮಗ ಇದ್ದ ಮನೆಯ ಪ್ರವೇಶ ಮಾರ್ಗವನ್ನು ಬಂದ್ ಮಾಡಿಬಿಟ್ಟಿದ್ದಾರೆ. ಸಾರಾ ಮಿಲ್ಲರ್ ಹಾಗೂ ಆಕೆಯ ಪುತ್ರರಿಬ್ಬರೂ ಇದರಿಂದ ಮನೆಯೊಳಗೆ ಹಾಗೂ ಹೊರಗೆ ಓಡಾಡಲು ಸಾಧ್ಯವಾಗದೇ ಕಿಟಕಿಗಳ ಮೂಲಕ ಪಿಝ್ಝಾ ತರಿಸಿಕೊಂಡು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಾರೆ.
ಕೊನೆಗೆ ಸಾರಾ ತಮ್ಮ ಮಾಜಿ ಪತಿ ಹಾಗೂ ಹಿರಿಯ ಪುತ್ರರ ನೆರವಿನಿಂದ ಈ ಭಾರೀ ಗಾತ್ರದ ಸೋಫಾಗಳನ್ನು ಮಾರ್ಗದ ಹೊರಗೆ ತಳ್ಳುವ ಮೂಲಕ ಓಡಾಡುವ ಹಾದಿಯನ್ನು ಸುಗಮಗೊಳಿಸಿದ್ದಾರೆ. ಘಟನೆ ಬಗ್ಗೆ ಕೇಳಿ ತಿಳಿದ ಬಳಿಕ ಸಾರಾಗೆ ಪರಿಹಾರದ ರೂಪದಲ್ಲಿ $270 ಗಳನ್ನು ಕೊಡಲು ಸೋಫಾ ಕಂಪನಿ ಮುಂದಾಗಿದೆ.