ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ತನ್ನ ಮಗನನ್ನು ಬಿಡಿಸಲು ತಾಯಿಯೊಬ್ಬಳು ಏಕಾಂಗಿಯಾಗಿ ಜೈಲಿನ ಪಕ್ಕ 35 ಅಡಿ ಸುರಂಗ ತೋಡಿದ ಘಟನೆ ಯುಕ್ರೇನ್ ನಲ್ಲಿ ನಡೆದಿದೆ.
ಆದರೆ, ಆಕೆ ಮಗನನ್ನು ಬಿಡಿಸುವ ಬದಲು ಪೊಲೀಸರ ಅತಿಥಿಯಾಗಿದ್ದು, ತಾನೂ ಜೈಲು ಸೇರಿದ್ದಾಳೆ.
51 ವರ್ಷದ ಮಹಿಳೆ ಮೊದಲು ಜೈಲಿನ ಸಮೀಪದ ಝಾಪೋರಿಜೈ ಪ್ರಾಂತ್ಯದಲ್ಲಿ ಬಾಡಿಗೆ ಮನೆ ಪಡೆದಿದ್ದಳು. ನಂತರ ಕೆಲವು ಸಲಾಕೆಗಳನ್ನು ತಂದುಕೊಂಡು ಮಣ್ಣು ತೆಗೆಯಲು ಟ್ರಾಲಿ ಹಿಡಿದು ಸುರಂಗ ತೋಡಲು ಪ್ರಾರಂಭಿಸಿದ್ದಳು.
ಶಬ್ದ ಮಾಡದೇ ಸ್ಕೂಟರ್ ನಲ್ಲಿ ಬಂದು ರಾತ್ರಿ ಮಾತ್ರ ಸುರಂಗ ತೋಡುವ ಕೆಲಸವನ್ನು ಆಕೆ ಮಾಡುತ್ತಿದ್ದಳು. ಒಂದು ದಿನದ ಕೆಲಸದ ನಂತರ ಆಕೆಯ ಮಗ ಇದ್ದ ಜೈಲಿನ ಕೋಣೆಯ ಸಮೀಪ ಸುಮಾರು 10 ಅಡಿ ಆಳಕ್ಕೆ ಬಾವಿ ತೋಡಿದ್ದಳು. ನಂತರ ಅದರೊಳಗಿಂದ
ಜೈಲಿನ ಒಳಗೆ ತೆರಳಲು ಅಡ್ಡಲಾಗಿ ಗೋಡೆಯ ಕೆಳಗಡೆ 35 ಅಡಿ ಸುರಂಗ ತೋಡಿದ್ದಳು.
ಆಕೆ ಹಗಲಿನ ಸಮಯವನ್ನು ಹೆಚ್ಚಾಗಿ ತನ್ನ ಬಾಡಿಗೆ ಮನೆಯ ಒಳಗೆ ಕಳೆಯುತ್ತಿದ್ದುದರಿಂದ ಹೊರಗಿನ ಸುತ್ತಲಿನ ಜನ ಅಥವಾ ಅಂಗಡಿಯವರೂ ಆಕೆಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಇದೇ ರೀತಿ ಆಕೆ ಒಂದು ವಾರ ಕೆಲಸ ಮಾಡಿದ ನಂತರ ಸಿಕ್ಕಿ ಬಿದ್ದಿದ್ದಾಳೆ. ಆದರೆ, ಜನ ಆಕೆಯ ಡೆಡಿಕೇಶನ್ ಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬಳೆ 30 ಅಡಿಗೂ ಅಧಿಕ ಉದ್ದದ ಸುರಂಗ ತೋಡಿ ದೊಡ್ಡ ಸಾಹಸ ಮಾಡಿದ್ದಾಳೆ ಎಂದಿದ್ದಾರೆ.