
ಇಂಗ್ಲೆಂಡ್ನ ಬೇಕಿ ಸ್ಟೈಲ್ಸ್ ಎಂಬಾಕೆ ತಮ್ಮ ಪುತ್ರನ ಬಾಯಿಯಲ್ಲಿ ರಂಧ್ರವಾಗಿದ್ದನ್ನ ಕಂಡು ಹೌಹಾರಿ ಹೋಗಿದ್ದಾಳೆ. ಅದನ್ನ ಮುಟ್ಟಿ ನೋಡೋಣ ಅಂದರೆ ಮಗು ಜೋರಾಗಿ ಅಳುತ್ತಿತ್ತು. ಕೂಡಲೇ ತಾಯಿ ಮಗುವನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.
ನಾನು ನನ್ನ ಮಗುವನ್ನ ಮುಟ್ಟಲು ಆತ ನನ್ನನ್ನ ಬಿಡಲಿಲ್ಲ. ಒಂದೇ ಸಮನೆ ಅಳಲು ಆರಂಭಿಸಿದ. ನಾನು ನಡುಗುತ್ತಿದ್ದೆ. ಕೂಡಲೇ ನಾನು ತುರ್ತು ಸೇವಾ ಕೇಂದ್ರಕ್ಕೆ ಕರೆದೊಯ್ಯಲು ಮುಂದಾದೆ. ಆದರೆ ನನ್ನ ತಂದೆ ಮಗುವನ್ನ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ರು.
ತಂದೆಯ ಮಾತಿನಂತೆ ನಾನು ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದೆ. ಆದರೆ ವೈದ್ಯರು ತಪಾಸಣೆ ಮಾಡಿದ ಬಳಿಕ ಅದು ರಂಧ್ರವಲ್ಲ ಬದಲಾಗಿ ಸ್ಟಿಕ್ಕರ್ ಎಂದು ಹೇಳಿದ್ರು. ಇದರಿಂದ ನನಗೆ ಮಗುವಿಗೆ ಏನಾಗಿಲ್ಲ ಎಂಬ ಖುಷಿ ಒಂದಡೆಯಾದರೆ ಆಸ್ಪತ್ರೆಯಲ್ಲಿ ಮುಜುಗರಕ್ಕೀಡಾದೆನ್ನಲ್ಲಾ ಎಂಬ ನೋವು ಮತ್ತೊಂದೆಡೆ ಇತ್ತು ಎಂದು ತಾಯಿ ಹೇಳಿಕೊಂಡಿದ್ದಾಳೆ.