alex Certify ಮರದೊಂದಿಗೆ ‘ಮದುವೆ’ ಮಾಡಿಕೊಂಡ ಎರಡು ಮಕ್ಕಳ ತಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದೊಂದಿಗೆ ‘ಮದುವೆ’ ಮಾಡಿಕೊಂಡ ಎರಡು ಮಕ್ಕಳ ತಾಯಿ…!

ಮರವೊಂದರ ಜೊತೆಗೆ ವಿವಾಹವಾಗಿರುವ ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಮಹಿಳೆಯೊಬ್ಬರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಕೇಟ್ ಕನ್ನಿಂಗ್‌ಹ್ಯಾಮ್ ಹೆಸರಿನ ಈ ಮಹಿಳೆ ಕಳೆದ ವರ್ಷ ಹರಿಯ ಮರವೊಂದರ ಜೊತೆಗೆ ವಿವಾಹ ಮಾಡಿಕೊಂಡಿದ್ದು, ಅವರ ಸರ್‌ನೇಮ್ ಅನ್ನು ’ಎಲ್ಡರ್‌’ ಎಂದು ಬದಲಿಸಿಕೊಂಡಿದ್ದಾರೆ. ಇಲ್ಲಿನ ಮೆರ್ಸೆಸೈಡ್‌ನ ಸೆಫ್ಟನ್‌ನಲ್ಲಿರುವ ರಿಮಾರ್ಸ್ ವ್ಯಾಲಿ ಕಂಟ್ರಿ ಪಾರ್ಕ್‌ನಲ್ಲಿನ ಈ ಮರದೊಂದಿಗೆ ತಮ್ಮ ವಿವಾಹವನ್ನು ಯಾವುದೇ ಕಾರಣಕ್ಕೂ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಟ್ ತಿಳಿಸಿದ್ದಾರೆ.

ತಮ್ಮ ಈ ಅಭಿಯಾನದಿಂದ ಈ ಪ್ರದೇಶದಲ್ಲಿ ಬೈಪಾಸ್ ಒಂದರ ನಿರ್ಮಾಣ ಮಾಡಿ, ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಹಾಳು ಮಾಡುವುದನ್ನು ವಿರೋಧಿಸಲು ದೊಡ್ಡ ಮಟ್ಟದ ಅಭಿಯಾನವೊಂದನ್ನು ಹಮ್ಮಿಕೊಳ್ಳಲು ನೆರವಾಗಬಹುದು ಎಂಬ ಆಶಯವನ್ನು 38 ವರ್ಷದ ಕೇಟ್ ಹೊಂದಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...