ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಲೇ ಮಗುವಿಗೆ ಜನ್ಮ ಕೊಟ್ಟ 32 ವರ್ಷದ ಮಹಿಳೆಯೊಬ್ಬರು, ಮರಳಿ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ.
ಕ್ಯಾರಿ-ಆನಿ ಆಸ್ಬೋರ್ನ್ ಹೆಸರಿನ ನಾಲ್ವರು ಮಕ್ಕಳ ಈ ತಾಯಿ, ಕಳೆದ ಡಿಸೆಂಬರ್ 29ರಂದು ಕೋವಿಡ್-19 ಪಾಸಿಟಿವ್ ಎಂದು ಕಂಡುಬಂದಿದ್ದರು. ಮನೆಯಲ್ಲೇ ಸ್ವಯಂ ದಿಗ್ಬಂಧನ ಮಾಡಿಕೊಂಡಿದ್ದ ಆನಿರ ಪರಿಸ್ಥಿತಿ ಹದಗೆಟ್ಟ ಕಾರಣ ಜನವರಿ 6ರಂದು ಅವರನ್ನು ಡರ್ಹಾಮ್ ಕೌಂಟಿಯ ಸ್ಟಾಕ್ಟನ್ನ ನಾರ್ತ್ ಟೀಸ್ ವಿವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಗೆಳೆಯನ ಅನೈತಿಕ ಸಂಬಂಧದ ಗುಟ್ಟು ಬಿಚ್ಚಿಟ್ಟ ಸ್ಮಾರ್ಟ್ ವಾಚ್…!
ಕೋಮಾದಲ್ಲಿ ದಾಖಲಾಗಿದ್ದ ಕ್ಯಾರಿ, ಇದೇ ವೇಳೆ ಸಿಸೇರಿಯನ್ ಮೂಲಕ ತಮ್ಮ 33 ವಾರಗಳ ಮಗುವಿಗೆ ಜನ್ಮವಿತ್ತಿದ್ದರು. ಕೋವಿಡ್ ಕಾರಣದಿಂದ ಕ್ಯಾರಿಗೆ ತನ್ನ ಮಗುವನ್ನು ಐದು ವಾರಗಳ ಮಟ್ಟಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅವರನ್ನು ಭೇಟಿಯಾಗಲು ಅವರ ಕುಟುಂಬಕ್ಕೂ ಅವಕಾಶ ಕೊಡದೇ ಇದ್ದ ಕಾರಣ ಆಕೆಯ ಪರಿಸ್ಥಿತಿಯನ್ನು ಅರಿಯಲು ಕುಟುಂಬದ ಸದಸ್ಯರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಫೋನ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದರು.
ಫೆಬ್ರವರಿ 18ರಂದು ತನ್ನ ಮಗಳನ್ನು ಭೇಟಿ ಮಾಡಿದ ಕ್ಯಾರಿ, ಮೊದಲ ಬಾರಿಗೆ ತಮ್ಮ ಕಂದನನ್ನು ನೋಡುವುದು ರೋಮಾಂಚನ ಮೂಡಿಸಿದ ಅನುಭವವಾಗಿತ್ತು ಎಂದಿದ್ದಾರೆ.