
ಅಮ್ಮ-ಮಗಳ ಜೋಡಿಯೊಂದು ಜೊತೆಜೊತೆಯಾಗಿಯೇ ವೈದ್ಯಕೀಯ ಪದವಿ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ.
ಮಾರ್ಚ್ 2020 ರಂದು ಡಾ. ಸಿಂತಿಯಾ ಕುಡ್ಜೀ ಸಿಲ್ವೆಸ್ಟರ್ ಹಾಗೂ ಡಾ. ಜಾಸ್ಮೈನ್ ಕುಡ್ಜೀ, ವೈದ್ಯಕೀಯ ಪದವಿ ಮುಗಿಸಿದ್ದಾರೆ. ಜಾಸ್ಮೈನ್ ಲೌಸಿಯಾನಾ ರಾಜ್ಯ ವಿವಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರೈಸಿದರೆ, ಆಕೆಯ ತಾಯಿ ಸಿಂತಿಯಾ ಕೆರಿಬ್ಬಿಯನ್ ದ್ವೀಪ ಸೇಂಟ್ ಕಿಟ್ಸ್‌ನ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ವಿವಿಯಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ.
31 ವರ್ಷಗಳ ಹಿಂದೆಯೇ ವೈದ್ಯೆಯಾಗುವ ಕನಸು ಕಂಡಿದ್ದ ಸಿಂತಿಯಾಗೆ ಮಗಳು ಜನಿಸಿದ ಕಾರಣ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿರಲಿಲ್ಲ. ತಮ್ಮ 19ನೇ ವಯಸ್ಸಿನಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆದ ಸಿಂತಿಯಾ ನಂತರದ ದಿನಗಳಲ್ಲಿ ಇದೇ ಕ್ಷೇತ್ರದಲ್ಲಿ ಬಡ್ತಿಯನ್ನೂ ಪಡೆದುಕೊಂಡು ದುಡಿಯುತ್ತಿದ್ದರು.
2013ರಲ್ಲಿ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಕಷ್ಟು ದುಡ್ಡು ಕೂಡಿಟ್ಟುಕೊಂಡ ಸಿಂತಿಯಾ, ಈ ಅವಧಿಯಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಕೋರ್ಸ್‌ಗೆ ಸೇರಿಕೊಂಡಿದ್ದರು.