alex Certify ಒಂದೇ ಕಾಕ್‌ಪಿಟ್‌ ಹಂಚಿಕೊಂಡು ಇತಿಹಾಸ ಸೃಷ್ಟಿಸಿದ ತಾಯಿ – ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಾಕ್‌ಪಿಟ್‌ ಹಂಚಿಕೊಂಡು ಇತಿಹಾಸ ಸೃಷ್ಟಿಸಿದ ತಾಯಿ – ಮಗಳು

ವಾಣಿಜ್ಯ ವಿಮಾನದ ಪೈಲಟ್‌ಗಳಾಗಿ ಒಂದೇ ಫ್ಲೈಟ್‌ನಲ್ಲಿ ಕೆಲಸ ಮಾಡಿದ ಅಮ್ಮ-ಮಗಳ ಜೋಡಿಯೊಂದು ಇತಿಹಾಸ ಸೃಷ್ಟಿಸಿದೆ.

ಅಮೆರಿಕದ ಸುಜಿ ಗರ‍್ರೆಟ್‌ ಕಳೆದ 30 ವರ್ಷಗಳಿಂದ ಪೈಲೆಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಡೊನ್ನಾ ಗರ‍್ರೆಟ್‌ ಜೊತೆಯಲ್ಲಿ ಕಾಕ್‌ಪಿಟ್‌ನಲ್ಲಿ ಕುಳಿತುಕೊಂಡು ವಿಮಾನ ಚಲಾಯಿಸುತ್ತಿರುವ ಚಿತ್ರವೊಂದನ್ನು ಸುಜಿ ಶೇರ್‌ ಮಾಡಿಕೊಂಡಿದ್ದಾರೆ. ಈ ಅಮ್ಮ-ಮಗಳು ಸದ್ಯದ ಮಟ್ಟಿಗೆ ಅಮೆರಿಕದ ಸ್ಕೈ-ವೆಸ್ಟ್‌ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಗಳಾಗಿದ್ದಾರೆ.

ಸುಜಿ ಪತಿ ಡೌಗ್ ಗರ‍್ರೆಟ್ ಹಾಗೂ ಪುತ್ರ ಮಾರ್ಕ್ ಸಹ ಪೈಲಟ್‌ಗಳಾಗಿದ್ದು, ಇದೊಂದು ’ಫ್ಲೈಯಿಂಗ್ ಫ್ಯಾಮಿಲಿ’ ಎಂದೇ ಹೇಳಬಹುದಾಗಿದೆ.

ಬಹಳ ಚಿಕ್ಕವಯಸ್ಸಿನಲ್ಲೇ ವಿಮಾನಯಾನದ ಪರಿಚಯವಾದ ದಿನದಿಂದ ಫ್ಲೈಟ್‌ ಚಲಾಯಿಸುವ ಕನಸು ಹೊಂದಿದ್ದು, ಅದು ಈಗ ನನಸಾಗಿರುವುದು ಬಹಳ ಖುಷಿ ಕೊಟ್ಟಿದೆ ಎಂದು ಡೊನ್ನಾ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...