ಕೊರೊನಾ ವೈರಸ್ ವಿರುದ್ಧ ಲಸಿಕೆ ಬಳಕೆ ಆರಂಭವಾಗಿದ್ದರೂ ಸಹ ಅನೇಕರು ಇನ್ನೂ ಸುಳ್ಳು ಸುದ್ದಿಗಳಿಗೆ ಬೆಲೆ ನೀಡಿ ತಾವೇ ಔಷಧಿಯನ್ನ ಕಂಡು ಹಿಡಿಯುವ ಹುಚ್ಚು ಸಾಹಸ ಮಾಡ್ತನೇ ಇರ್ತಾರೆ.
ಇದೇ ರೀತಿಯ ಹುಚ್ಚು ಪ್ರಯತ್ನವೊಂದರಲ್ಲಿ ಲಂಡನ್ನ ತಾಯಿ ಹಾಗೂ ಆಕೆಯ ಮಕ್ಕಳು ನಿರಂತರ ನಾಲ್ಕು ದಿನಗಳ ಕಾಲ ಮೂತ್ರವನ್ನ ಕುಡಿದಿದ್ದಾರೆ. ಸುಳ್ಳು ಸುದ್ದಿಯನ್ನು ನಂಬಿ ತಾಯಿ ಹಾಗೂ ಮಕ್ಕಳು ಈ ಹುಚ್ಚು ಸಾಹಸ ಮಾಡಿದ್ದಾರೆ.
ಸ್ನೇಹಿತರೋ ಇಲ್ಲವೇ ಸಂಬಂಧಿಕರೊಬ್ಬರು ವಾಟ್ಸಾಪ್ನಲ್ಲಿ ಕಳುಹಿಸಿದ ವಿಡಿಯೋವೊಂದನ್ನ ನಂಬಿ ಈ ಕುಟುಂಬ ತಮ್ಮ ಮೂತ್ರವನ್ನ ತಾವೇ ಕುಡಿದಿದೆ.