ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಕೋಟಿ 32 ಲಕ್ಷ ಗಡಿದಾಟಿದೆ. ಕೊರೊನಾ ಎಲ್ಲರಿಂದಲೂ ಹರಡುತ್ತಿಲ್ಲ. ಸೂಪರ್ ಸ್ಪ್ರೆಡರ್ ಗಳಿಂದ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಸೂಪರ್ ಸ್ಪ್ರೆಡರ್ ಒಂದಲ್ಲ, ಎರಡಲ್ಲ ನೂರಾರು ಮಂದಿಗೆ ಕೊರೊನಾ ಹರಡುತ್ತಿದ್ದಾರೆ.
ಮೇ ತಿಂಗಳಲ್ಲಿ ಅಹಮದಾಬಾದ್ನಲ್ಲಿ ಅನೇಕ ಸೂಪರ್ ಸ್ಪ್ರೆಡರ್ಗಳು ಕಂಡು ಬಂದಿದ್ದಾರೆ. ಸೂಪರ್ ಸ್ಪ್ರೆಡರ್ ಹೊರಬಂದರೆ ಸಂಪರ್ಕದಲ್ಲಿರುವ ಎಲ್ಲ ಜನರು ಕೊರೊನಾಗೆ ತುತ್ತಾಗ್ತಾರೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸೂಪರ್ ಸ್ಪ್ರೆಡರ್ ಇಂಗ್ಲೀಷ್ ಪದ. ಕೊರೊನಾವನ್ನು ವೇಗವಾಗಿ ಹರಡುವವರಿಗೆ ಹೀಗೆಂದು ಕರೆಯಲಾಗುತ್ತದೆ. ಸಾಮಾನ್ಯ ಕೊರೊನಾ ರೋಗಿಯ ಮೂಲಕ ವೈರಸ್ 1 ರಿಂದ 3 ಜನರನ್ನು ತಲುಪುತ್ತದೆ. ಸೂಪರ್ ಸ್ಪ್ರೆಡರ್ ಇದನ್ನು ಅನೇಕ ಆರೋಗ್ಯವಂತ ಜನರಿಗೆ ಹರಡುತ್ತಾರೆ.
ಶೇಕಡಾ 80ರಷ್ಟು ಜನರಿಗೆ ಕೊರೊನಾ ಬಂದಿರುವುದು ಈ ಸೂಪರ್ ಸ್ಪ್ರೆಡರ್ ಗಳಿಂದ. ಇವ್ರು ಸುಮಾರು 10ಕ್ಕೂ ಹೆಚ್ಚು ಮಂದಿಗೆ ಕೊರೊನಾ ಹರಡಿರುತ್ತಾರೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ಇದ್ರ ಬಗ್ಗೆ ವಿವರಿಸಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಆಡಮ್ ಚರ್ಚ್ಸ್ಕಿ ಹೇಳುವಂತೆ ಕೊರೊನದ ವಿಷಯದಲ್ಲಿ, ಶೇಕಡಾ 10 ರಷ್ಟು ರೋಗಿಗಳಿಂದ 80 ಪ್ರತಿಶತದಷ್ಟು ಸೋಂಕು ಹರಡುತ್ತದೆ. ಇದರರ್ಥ ಉಳಿದ ರೋಗಿಗಳಿಂದ ಸೋಂಕು ಹರಡುವ ಭಯ ಬಹಳ ಕಡಿಮೆ ಎಂದಿದ್ದಾರೆ. ಆದ್ರೆ ಅವ್ರಿಂದ ಏಕೆ ವೇಗವಾಗಿ ಹರಡುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ.