ಲಾಕ್ಡೌನ್ ವೇಳೆ ಸಂಕಷ್ಟದಲ್ಲಿ ಸಿಲುಕಿದವರಿಗೆ ನೆರವಾದವರನ್ನು ಸ್ಮರಿಸುವ ಕಾರ್ಯ ವಿವಿಧ ರೀತಿಯಲ್ಲಿ ವಿಶ್ವಾದ್ಯಂತ ನಡೆಯುತ್ತಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಜನರಿಗೆ ಆಹಾರ ವಿತರಿಸಿದವರನ್ನು ಸ್ಮರಿಸುವುದಕ್ಕಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.
ವೈದ್ಯರು, ನರ್ಸ್ ಗಳು ಪ್ರಶಂಸೆ ಗಿಟ್ಟಿಸಿದ್ದು ಒಂದು ಕಡೆಯಾದರೆ, ಶುಕ್ರವಾರ ಮಾಸ್ಕೋದಲ್ಲಿ ವಿಶೇಷವಾದ ಸ್ಮಾರಕ ಅನಾವರಣಗೊಂಡಿತು. ಇದು ಡೆಲಿವರಿ ಕ್ಷೇತ್ರದಲ್ಲಿ ಸೇವೆ ಮಾಡಿದಂತಹರನ್ನು ಸ್ಮರಿಸುವುದಕ್ಕಾಗಿಯೇ ಮಾಡಲಾಗಿತ್ತು.
ಕಲಾವಿದ ಅಲೆಕ್ಸಿ ಗರಿಕೋವಿಚ್ ವಿನ್ಯಾಸಗೊಳಿಸಿದ ಸ್ಮಾರಕ ಸುಮಾರು ಮೂರು ಮೀಟರ್ ಎತ್ತರ ಹೊಂದಿದ್ದು, ಮನುಷ್ಯನ ರೂಪವಿದೆ.
ಕೊರೊನಾ ಹಾವಳಿ ವಿಪರೀತವಾದಾಗ ಜನರು ಮನೆಯಿಂದ ಹೊರ ಬರಲು ಅವಕಾಶ ನೀಡಿರಲಿಲ್ಲ. ತುರ್ತು ಆರೋಗ್ಯ ಸೇವೆಗೆ ಮತ್ತು ಆಹಾರ ಖರೀದಿಗೆ ಮಾತ್ರ ಅನುಮತಿಸಲಾಗಿತ್ತು. ಈ ವೇಳೆ ರ್ಮಾರ್ಕೆಟ್ ಮತ್ತು ರೆಸ್ಟೋರೆಂಟ್ ಗಳಿಂದ ವಿತರಕರು ಮನೆಮನೆಗಳಿಗೆ ಪಾರ್ಸಲ್ ತಲುಪಿಸಿದ್ದರು.