ಕೊರೊನಾ ವೈರಸ್ನ್ನ ಕೊನೆಗಾಣಿಸಬೇಕು ಅಂತಾ ಪಣ ತೊಟ್ಟಿರೋ ರಷ್ಯಾ ಈಗಾಗಲೇ ಕೊರೊನಾ ಲಸಿಕೆ ಕಂಡು ಹಿಡಿಯೋದ್ರಲ್ಲಿ ಬ್ಯುಸಿಯಾಗಿದೆ. ಲಸಿಕೆ ಬರೋದ್ರ ಒಳಗೆ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಮಾಡಬೇಕು ಅಂತಾ ಮಾಸ್ಕೋದಲ್ಲಿ ಹೊಸ ರೂಲ್ಸ್ ಒಂದನ್ನ ಜಾರಿ ಮಾಡಲಾಗಿದೆ.
ಮಾಸ್ಕೋದಲ್ಲಿ ಈಗ ಬಾರ್ಗಳು, ಕ್ಲಬ್ಗಳು ಹಾಗೂ ಡ್ಯಾನ್ಸ್ ಹಾಲ್ಗಳು ಓಪನ್ ಆಗಿವೆ. ಇಲ್ಲಿ ಬರುವ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡ್ರೆ ಅವರ ಪ್ರಾಥಮಿಕ ಸಂಪರ್ಕಿತರನ್ನ ಹುಡುಕೋದು ಸುಲಭವಾಗಲಿ ಅಂತಾ ಮೇಯರ್ ಹೊಸ ಪ್ಲಾನ್ ಒಂದನ್ನ ಮಾಡಿದ್ದಾರೆ.
ಇಂತಹ ಸ್ಥಳಕ್ಕೆ ಬರುವ ಸಿಬ್ಬಂದಿ ಹಾಗೂ ಗ್ರಾಹಕರು ತಮ್ಮ ನಂಬರ್ಗಳ ಮೂಲಕ ಕ್ಯೂಆರ್ ಕೋಡ್ನ್ನ ಸ್ಕ್ಯಾನ್ ಮಾಡಬೇಕು. ಇಲ್ಲವೇ 7377 ಎಂಬ ವಿಶೇಷ ನಂಬರ್ಗೆ ಮೆಸೇಜ್ನ್ನ ಕಳಿಸಬೇಕು. ಈ ರೀತಿ ಕೋಡ್ ಸ್ಕ್ಯಾನಿಂಗ್ ಅಥವಾ ಮೆಸೇಜ್ ಕಳಿಸುವ ವೇಳೆ ಯಾರೂ ಕೂಡ ತಪ್ಪು ನಂಬರ್ ಕೊಡೋಕೆ ಆಗಲ್ಲ. ಹೀಗಾಗಿ ನಮಗೆ ಪ್ರಾಥಮಿಕ ಸಂಪರ್ಕಿತರನ್ನ ಹುಡುಕೋದು ಸುಲಭವಾಗುತ್ತೆ ಅಂತಾ ಮಾಸ್ಕೋ ಮೇಯರ್ ಹೇಳಿದ್ದಾರೆ.