ವಿಶ್ವದ ಬಹುತೇಕ ದೇಶಗಳು ಕೊರೊನಾ ವೈರಸ್ ನೊಂದಿಗೆ ಹೋರಾಡುತ್ತಿವೆ. ಆದರೆ ದಕ್ಷಿಣ ಅಮೆರಿಕಾ ದೇಶಗಳ ಪರಿಸ್ಥಿತಿ ಗಂಭೀರವಾಗಿದೆ. ಕಳೆದ 5 ದಿನಗಳಲ್ಲಿ ಬೊಲಿವಿಯಾದ ಪ್ರಮುಖ ನಗರಗಳ ಬೀದಿ ಮತ್ತು ಮನೆಗಳಿಂದ 400 ಕ್ಕೂ ಹೆಚ್ಚು ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ದೇಹಗಳ ಸ್ಥಿತಿಯನ್ನು ನೋಡಿದ್ರೆ ಶೇಕಡಾ 85 ಕ್ಕಿಂತ ಹೆಚ್ಚು ಜನರು ಕೊರೊನಾ ಸೋಂಕಿತರು ಎಂದು ಪೊಲೀಸರು ಹೇಳಿದ್ದಾರೆ.
ಚಿಕಿತ್ಸೆ ಕೊರತೆಯಿಂದ ಅವರು ಮನೆಯಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಬೊಲಿವಿಯಾದ ನಗರವಾದ ಕೊಚಬಾಂಬಾದಲ್ಲಿ ಸುಮಾರು 191 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾ ಪಾಜ್ ನಗರದಲ್ಲಿ 141 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲ ಶವ ಮನೆಗಳಲ್ಲಿ ಕೊಳೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ದೇಶದ ಅತಿದೊಡ್ಡ ನಗರವಾದ ಸಾಂತಾ ಕ್ರೂಜ್‌ನ ಬೀದಿಗಳಿಂದ 68 ಶವಗಳನ್ನು ವಶಕ್ಕೆ ಪಡೆಯಲಾಗಿದೆ.