ಕೊರೊನಾ ವೈರಸ್ನಿಂದ ಪಾರಾಗಬೇಕು ಅಂತಾ ಸರ್ಕಾರ ಲಸಿಕೆಗಳನ್ನ ಪ್ರಯೋಗ ಮಾಡ್ತಿದ್ರೆ ಜನಸಾಮಾನ್ಯರು ಕಷಾಯಗಳ ಮೊರೆ ಹೋಗ್ತಿದ್ದಾರೆ. ಆದರೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ಸರಿಯಾದ ನಿದ್ದೆಯು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯವನ್ನ ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಬಿಎಂಜೆ ನ್ಯೂಟ್ರಿಷಿಯನ್ ಪ್ರಿವೆನ್ಶನ್ನಲ್ಲಿ ಈ ವರದಿಯನ್ನ ಪ್ರಕಟಿಸಲಾಗಿದೆ. 8 ಮಂದಿ ವಿಜ್ಞಾನಿಗಳು ಕಳೆದ ವರ್ಷ ಜುಲೈ 17ರಿಂದ ಸೆಪ್ಟೆಂಬರ್ 25ರ ವರೆಗೆ ಈ ಸಮೀಕ್ಷೆಯನ್ನ ನಡೆಸಿದ್ದರು.
ಈ ಅಧ್ಯಯನದಲ್ಲಿ ನಿದ್ದೆ ಸರಿಯಾಗಿ ಆಗದೇ ಇರುವವರಿಗೆ ಕೊರೊನಾದ ಅಪಾಯ ಮಾತ್ರವಲ್ಲದೇ ಇತರೆ ಗಂಭೀರ ಕಾಯಿಲೆಗಳೂ ಬರುವ ಅಪಾಯ ಹೆಚ್ಚು ಎಂದು ತಿಳಿದು ಬಂದಿದೆ. ಅಲ್ಲದೇ ಯಾವುದೇ ಕಾಯಿಲೆಗಳು ಬಂದ ಬಳಿಕ ಅದು ವಾಸಿಯಾಗೋಕೆ ಬಹಳ ಸಮಯ ತೆಗೆದುಕೊಳ್ಳುತ್ತೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಪ್ರತಿ ಒಂದು ಗಂಟೆ ನಿದ್ದೆಯು ಕೊರೊನಾದ ಅಪಾಯವನ್ನ 12 ಪ್ರತಿಶತ ದೂರ ಮಾಡುತ್ತೆ ಎಂದು ಅಧ್ಯಯನ ಹೇಳಿದೆ. ಈ ಸರ್ವೇಯಲ್ಲಿ 2884 ಮಂದಿ ಆರೋಗ್ಯ ಕಾರ್ಯಕರ್ತರು ಭಾಗಿಯಾಗಿದ್ದರು. ಇದರಲ್ಲಿ 568 ಮಂದಿ ಆರೋಗ್ಯ ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದರು.