ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. ಆದ್ರೆ ಈ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ.
ಯುರೋಪ್, ಉತ್ತರ ಅಮೆರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಕೊರೊನಾ ವೈರಸ್‌ನಲ್ಲಿ ಕಂಡುಬರುವ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗಬಹುದು ಆದ್ರೆ ಹೆಚ್ಚು ಅಪಾಯಕಾರಿಯಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ.
ಡಿ 614 ಜಿ ರೂಪಾಂತರದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಇದು ಕಡಿಮೆ ಮಾರಕವಾಗಿದೆ. ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ ಆದರೆ ಕಡಿಮೆ ಮಾರಕವಾಗಿರುವುದು ಒಳ್ಳೆಯದು ಎಂದು ವೈದ್ಯ ಟ್ಯಾಂಬಿಯಾ ಹೇಳಿದ್ದಾರೆ.
ಹೆಚ್ಚಿನ ವೈರಸ್‌ಗಳು ರೂಪಾಂತರಗೊಳ್ಳುತ್ತಿದ್ದಂತೆ, ಅವುಗಳ ಜೀನ್‌ಗಳು ಬದಲಾದಂತೆ ಅವು ಕಡಿಮೆ ಮಾರಕವಾಗುತ್ತವೆ ಎಂದು ಅವರು ಹೇಳಿದ್ದಾರೆ. ಆದ್ರೆ ಕೆಲ ವಿಜ್ಞಾನಿಗಳು ಡಿ614 ಜಿ ವೈರಸ್ ಹೆಚ್ಚು ಸಾಂಕ್ರಾಮಿಕ ಎಂಬುದಕ್ಕೆ ಯಾವುದೇ ಖಚಿತ ಮಾಹಿತಿಯಿಲ್ಲವೆಂದಿದ್ದಾರೆ.