alex Certify ಈ ಏರಿಯಾದ ಜನರನ್ನು ಬೆಚ್ಚಿ ಬೀಳಿಸುತ್ತಿವೆ ದೈತ್ಯ ಇಲಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಏರಿಯಾದ ಜನರನ್ನು ಬೆಚ್ಚಿ ಬೀಳಿಸುತ್ತಿವೆ ದೈತ್ಯ ಇಲಿಗಳು

ಬೆಕ್ಕು ಹಾಗೂ ಮೊಲದ ಗಾತ್ರದ ಇಲಿಗಳು ಬ್ರಿಟನ್‌ನ ಸುದರ್ಲೆಂಡ್ ನಿವಾಸಿಗಳ ನಿದ್ರೆ ಕದಿಯುತ್ತಿವೆ. ಇಲ್ಲಿನ ಡಾನ್ನಿಸನ್ ಸ್ಟ್ರೀಟ್‌ನಲ್ಲಿ ಈ ಇಲಿಗಳಿದ್ದು, ಬಹಳ ದಿನಗಳ ಮಟ್ಟಿಗೆ ರಿಪೇರಿ ಮಾಡದೇ ಉಳಿದ ಚರಂಡಿಯೊಂದರಿಂದ ಹೊರ ಬಂದಿವೆ.

30ಕ್ಕಿಂತ ಹೆಚ್ಚಿನ ಇಲಿಗಳ ಈ ಗ್ಯಾಂಗ್‌ ಇಲ್ಲಿನ ಬೀದಿಗಳಲ್ಲಿ ಅಡ್ಡಾಡಿಕೊಂಡು ಮನೆಗಳಲ್ಲಿ ಲೂಟಿ ಮಾಡುತ್ತಿದ್ದು, ಸೋಫಾಗಳ ಕೆಳಗೆಲ್ಲಾ ಅಡಗಿ ಕುಳಿತಿವೆ. ತಮ್ಮ ಕುಟುಂಬಗಳಿಗೆ ಎಲ್ಲಿ ಈ ಇಲಿಗಳಿಂದ ಅನಾರೋಗ್ಯ ವಕ್ಕರಿಸಲಿದೆಯೋ ಎಂಬ ಚಿಂತೆ ಇಲ್ಲಿನ ಸ್ಥಳೀಯರಿಗೆ ಆವರಿಸಿದ್ದು, ಈ ಕಾಟದಿಂದ ಮುಕ್ತರಾಗಲು ಕ್ರಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

“ಈ ಇಲಿಗಳು ದಿನೇ ದಿನೇ ದೊಡ್ಡವಾಗುತ್ತಿದ್ದು ಬೆಕ್ಕುಗಳಷ್ಟು ಗಾತ್ರದಲ್ಲಿ ಕಾಣುತ್ತಿವೆ. ನಾನು ಪ್ರತಿನಿತ್ಯ 2-3 ಇಲಿಗಳನ್ನು ಹಿಡಿಯುತ್ತಿದ್ದೇನೆ. ಕಸದ ಬುಟ್ಟಿಗಳಲ್ಲಿ ಒಮ್ಮೊಮ್ಮೆ ಆರು ಇಲಿಗಳು ಕಾಣಸಿಗುತ್ತವೆ. ಚೆರ‍್ರಿ ತಿನ್ನಲೆಂದು ಬಟ್ಟೆ ಒಗೆಯುವ ಜಾಗದಲ್ಲೆಲ್ಲಾ ಅವು ಅಡ್ಡಾಡುವುದನ್ನು ಕಾಣಬಹುದು. ಇವುಗಳು ಕಳೆದ ಆರು ತಿಂಗಳುಗಳಿಂದ ಹೀಗೆ ಕಾಣಿಸುತ್ತಿವೆ. ಚೆಷೈರ್‌ ಬೆಕ್ಕುಗಳಂತೆ ಅವುಗಳು ದಿನೇ ದಿನೇ ದೊಡ್ಡದಾಗಿ ಬೆಳೆಯುತ್ತಿವೆ” ಎಂದು ಈ ಡಾನ್ನಿಸನ್ ಸ್ಟ್ರೀಟ್‌ನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿರುವ ಜಿಮ್ಮಿ ಸ್ಮಾರ್ಟ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...