ಲಾಕ್ ಡೌನ್ ಸಂದರ್ಭದಲ್ಲಿ ತಂದಿಟ್ಟಿದ್ದ ಆಲೂಗಡ್ಡೆ ಮೊಳಕೆಯೊಡೆದು ಗೋಡೆ ತುಂಬಾ ಚಿತ್ತಾರ ಮೂಡಿಸಿದೆ. ಹೌದು, ಫ್ರಾನ್ಸ್ ನಲ್ಲಿ ಓದುತ್ತಿರುವ ಡೊನ್ನ ಪೋರಿ ಎಂಬ ವಿದ್ಯಾರ್ಥಿನಿ, ತನ್ನ ಮನೆಯೊಳಗೆ ಆಲೂಗಡ್ಡೆ ತಂದಿಟ್ಟಿದ್ದಳು. ಲಾಕ್ ಡೌನ್ ಸಂದರ್ಭದಲ್ಲಿ ಅದನ್ನು ಮರೆತು ಊರಿಗೆ ಹೋಗಿದ್ದಳು.
ಮೂರು ತಿಂಗಳ ಬಳಿಕ ಬಂದು ಮನೆ ಬಾಗಿಲು ತೆಗೆದು ನೋಡಿದರೆ, ಅಚ್ಚರಿಯೋ ಅಚ್ಚರಿ. ಗೋಡೆ ಬದಿಯ ಸಂದುಗೊಂದುಗಳಿಂದ ಗುಲಾಬಿ ಬಣ್ಣದ ಬಳ್ಳಿಯಂತಿರುವ ಆಲೂಗಡ್ಡೆಯ ಮೊಳಕೆ, ಚಿತ್ತಾರ ಮೂಡಿಸಿತ್ತು. ಇದನ್ನು ಜಾಲತಾಣದಲ್ಲಿ ಆಕೆ ಹಂಚಿಕೊಂಡಿದ್ದು, ವೈರಲ್ ಆಗಿದೆ.
https://twitter.com/donna9p/status/1271455781007884288?ref_src=twsrc%5Etfw%7Ctwcamp%5Etweetembed%7Ctwterm%5E1271455781007884288%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fmonster-potatoes-take-over-french-womans-house-in-her-absence-amid-covid-19-lockdown-2699711.html