ನಾವು ಬೆಟ್ಟವನ್ನೋ, ಗುಡ್ಡವನ್ನೋ ಹತ್ತುವಾಗ ನೂರೆಂಟು ಒದ್ದಾಟ ನಡೆಸುವುದುಂಟು. ಕೂತು, ಮಲಗಿ, ತೆವಳಿ, ಅಂಬೆಗಾಲಿಟ್ಟು, ಹಗ್ಗ ಹಿಡಿದು ಹತ್ತಿದರೂ ನಮಗದು ಸಾಹಸವೇ ಸರಿ. ಆದರೆ, ಬೌದ್ಧ ಭಿಕ್ಕು ಒಬ್ಬರು ನೋಡ ನೋಡುತ್ತಲೇ ಸಲೀಸಾಗಿ ಬಂಡೆ ಏರಿಬಿಟ್ಟರು.
80 ಡಿಗ್ರಿಯಷ್ಟು ನೀಳವಾದ ಬಂಡೆಗಲ್ಲನ್ನೇರಲು ಅನೇಕರು ಹಗ್ಗ ಹಿಡಿದು ಪ್ರಯಾಸಪಡುತ್ತಿದ್ದರು. ಇದೇ ಟೈಮಿಗೆ ಬಂದ ಬೌದ್ಧ ಭಿಕ್ಕು, ಸರಾಗವಾಗಿ, ಯಾವ ಸಲಕರಣೆಗಳ ಸಹಾಯವೂ ಇಲ್ಲದೆ, ಬರಿಗಾಲಲ್ಲಿ ಬೆಟ್ಟವನ್ನೇರುವ ವಿಡಿಯೋ ವೈರಲ್ ಆಗಿದ್ದು, ಯಾ ಮೋಹ್ತ ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಜೊತೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನನ್ನ ಮೊದಲ ದಿನ ಎಂದು ಅಡಿಶೀರ್ಷಿಕೆ ಹಾಕಿದ್ದಾರೆ.
ತರಹೇವಾರಿ ಕಮೆಂಟ್ ಗಳು ಬಂದಿದ್ದು, ಸನ್ಯಾಸಿಗಳೆಂದರೆ ಶಕ್ತಿ, ಸಾಹಸಮಯಿಗಳು ಎಂಬೆಲ್ಲ ಶ್ಲಾಘನೆಗಳು ವ್ಯಕ್ತವಾಗಿವೆ. 7 ದಶಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದು, 3 ಲಕ್ಷ ಮೆಚ್ಚುಗೆ ವ್ಯಕ್ತವಾಗಿದೆ. 62 ಸಾವಿರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.