ಸಿಯೋಲ್: ಕೊರೊನಾ ವೈರಸ್ ಭಯದಿಂದ ವ್ಯಕ್ತಿಯೊಬ್ಬ ನೋಟುಗಳನ್ನು ವಾಶಿಂಗ್ ಮಷಿನ್ ನಲ್ಲಿ ತೊಳೆದು ಮೈಕ್ರೊವೇವ್ ನಲ್ಲಿ ಒಣಗಿಸಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಸೌತ್ ಕೊರಿಯಾದಲ್ಲಿ ನಡೆದಿದೆ.
ಸಿಯೋಲ್ ಸಮೀಪದ ಅನ್ ಸನ್ ನಗರದ ವ್ಯಕ್ತಿಯೊಬ್ಬ 50 ಸಾವಿರ ವೊನ್ ಮುಖಬೆಲೆಯ ಸಾಕಷ್ಟು ಸುಟ್ಟು ಹೋದ ನೋಟುಗಳನ್ನು ಬ್ಯಾಂಕ್ ಗೆ ತಂದು ಬದಲಾಯಿಸಿಕೊಡುವಂತೆ ಕೇಳಿದ್ದಾನೆ.
ಕುಟುಂಬದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಸ್ನೇಹಿತರು, ಕುಟುಂಬದವರು ಕಂಬನಿ ನಿಧಿಯಾಗಿ ನೀಡಿದ್ದ ನೋಟುಗಳನ್ನು ವಾಷಿಂಗ್ ಮಷಿನ್ ಗೆ ಹಾಕಿ ತೊಳೆದು ಮೈಕ್ರೊವೇವ್ ನಲ್ಲಿ ಒಣಗಿಸಲು ಮುಂದಾಗಿದ್ದ. ಆಗ ತುಂಬಾ ನೋಟುಗಳು ಸುಟ್ಟು ಹೋಗಿವೆ.
ಎಷ್ಟು ಹಣ ನಷ್ಟವಾಗಿದೆ ಎಂಬುದು ನಿಗದಿತವಾಗಿ ತಿಳಿದಿಲ್ಲ. ಆದರೆ, ಹಾನಿಯ ಪ್ರಮಾಣ ಹೆಚ್ಚಿದ್ದರಿಂದ ಬ್ಯಾಂಕ್ ನಿಯಮಾವಳಿಯಂತೆ ವ್ಯಕ್ತಿಯ ಬೇಡಿಕೆಗೆ ಸ್ಪಂದಿಸಲಾಗಿದೆ. ಆದರೆ, ನೋಟಿನ ಮುಖ ಬೆಲೆಯ ಅರ್ಧ ಮೌಲ್ಯವನ್ನು ಮಾತ್ರ ನೀಡಲಾಗಿದೆ. ಒಟ್ಟಾರೆ 23 ಲಕ್ಷ ವೊನ್ ಮೌಲ್ಯದ ಹೊಸ ನೋಟುಗಳನ್ನು ಆತನಿಗೆ ಒದಗಿಸಲಾಗಿದೆ ಎಂದು ಬ್ಯಾಂಕ್ ನ ಮಹಿಳಾ ಅಧಿಕಾರಿ ಸಿಯೋ ಜೀ ವೋವ್ನ್ ಹೇಳಿದ್ದಾರೆ.
ಬ್ಯಾಂಕ್ ಗೌಪ್ಯತೆಯ ನಿಯಮಾವಳಿಯಂತೆ ಹಣ ಕಳೆದುಕೊಂಡ ವ್ಯಕ್ತಿಯ ಪೂರ್ಣ ಹೆಸರು ಹೇಳಿಲ್ಲ. ಅವರ ಕುಟುಂಬದ ಹೆಸರು ಇಯೋಮ್ ಎಂದಷ್ಟೇ ತಿಳಿಸಲಾಗಿದೆ. ಆದರೆ, ಇನ್ನು ಕೆಲವರು ಹಣ ಕಳೆದುಕೊಂಡವನ ಹೆಸರು ಕಿಮ್ ಎಂಬ ಮಾಹಿತಿ ನೀಡಿದ್ದಾರೆ.