alex Certify ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…!

Money Heist Gone Wrong? Three Men Blow up ATM at Chinese Eatery in US but Flee Empty-handed

ಎಟಿಎಂ ಯಂತ್ರವನ್ನು ಸ್ಫೋಟಿಸಿದರೆ ಅದರೊಳಗಿರುವ ಹಣ ಹೊರಗೆ ಬರುತ್ತದೆ. ಅದನ್ನು ದೋಚಿ ಪರಾರಿಯಾಗಬಹುದೆಂಬ ಕಳ್ಳರ ಆಲೋಚನೆ ತಲೆಕೆಳಗಾದ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ.

ರಾತ್ರಿ 9 ಗಂಟೆಯ ನಂತರ ಅಮೆರಿಕಾದ ವಾಯುವ್ಯ ಫಿಲಡೆಲ್ಫಿಯಾದ ಗೋಲ್ಡನ್ ಚೈನೀಸ್ / ಅಮೇರಿಕನ್ ಟೇಕ್ ‌ಔಟ್ ರೆಸ್ಟೋರೆಂಟ್‌ಗೆ ಮೂವರು ಪ್ರವೇಶಿಸಿದರು. ಬಳಿಕ ಗ್ರಾಹಕರ ರೀತಿ ಆಹಾರಕ್ಕೆ ಆರ್ಡರ್ ಮಾಡಿದ್ದಾರೆ.

ರೆಸ್ಟೋರೆಂಟ್ ಸಿಬ್ಬಂದಿ ಆಹಾರ ತಯಾರಿಕೆಯಲ್ಲಿ ತೊಡಗಿದ್ದಾಗ ಈ ಕಳ್ಳರು ಎಟಿಎಂಗೆ ಕೆಲವು ಸಾಧನ ಬಳಸಿ ಸ್ಫೋಟಿಸಿದ್ದಾರೆ. ಇದರಿಂದ ಎಟಿಎಂನ ವಿಂಡೋ, ಅಲ್ಲಿದ್ದ ಕೆಲವು ವಸ್ತುವಿಗೆ ಹಾನಿಯಾಗಿದೆ. ಆದರೆ ಒಂದು ಪೈಸೆ ಸಹ ಹಣ ಹೊರಗೆ ಬರಲಿಲ್ಲ. ನಗದು ಇದ್ದ ಪೆಟ್ಟಿಗೆ ತೆಗೆಯಲೂ ಸಹ ಬರಲಿಲ್ಲ.

ನಂತರ ಮೂವರು ಸಹ ಅಲ್ಲಿಂದ ಓಡಿಹೋದರು, ಒಬ್ಬರು ಬೈಸಿಕಲ್ ಬಳಸಿದರೆ ಇನ್ನಿಬ್ಬರು ಕಾಲ್ನಡಿಗೆಯಲ್ಲಿ ಅಲ್ಲಿಂದ ತೆರಳಿದ್ದಾರೆ. ಪೊಲೀಸರು ಶಂಕಿತರಿಗಾಗಿ ಶೋಧ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...