ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾದಿಂದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಮಾರ್ಗವೆಂದು ತಿಳಿದಿದ್ದರೂ ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಂಡರೇ ಇದು ಸಾಧ್ಯವಿಲ್ಲ.
ಆದ್ದರಿಂದ ಇದೀಗ ಅಮೆರಿಕ ಒಂದು ಹಳ್ಳಿ ಆರ್ಥಿಕತೆ ನೆಲಕಚ್ಚಿದ್ದರೂ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಳ್ಳಲು ಹೊಸ ತಂತ್ರಕ್ಕೆ ಮುಂದಾಗಿದ್ದಾರೆ. ಅದೇ ಮರದ ಕರೆನ್ಸಿ. ಇದಕ್ಕೆ ಕೊರೋನಾ ನೋಟು ಎಂದು ಕರೆಯಲಾಗಿದೆ. ಈ ನೋಟನ್ನು ಬಳಸಿಕೊಂಡು ಈ ಗ್ರಾಮದಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ನೋಟುಗಳನ್ನು ಬಳಸಿಕೊಂಡು ಮದ್ಯ, ಗಾಂಜಾ ಹಾಗೂ ತಂಬಾಕು ಖರೀದಿಸುವಂತಿಲ್ಲ ಎಂದು ಹೇಳಲಾಗಿದೆ.
ಬಿಳಿ ಅಥವಾ ಹಳದಿ ಬಣ್ಣದ ಈ ನೋಟುಗಳ ಮೇಲೆ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್‌ಟನ್ ಅವರ ಚಿತ್ರವನ್ನು ಮುದ್ರಿಸಲಾಗಿದೆ. ಈ ನೋಟುಗಳನ್ನು ಬಳಸುವುದರಿಂದ, ಇದೀಗ ಗ್ರಾಮದ ಹಣ ಗ್ರಾಮದಲ್ಲಿಯೇ ಉಳಿಯಲಿದೆ. ಆದ್ದರಿಂದ ಈ ರೀತಿಯ ಕಾರ್ಯಕ್ಕೆ ಗ್ರಾಮ ಮುಂದಾಯಿತು ಎಂದು ಗ್ರಾಮದ ಅಧ್ಯಕ್ಷ ಟೆನಿನೋ ಚೇಂಬರ್ ಅಭಿಪ್ರಾಯಪಟ್ಟಿದ್ದಾರೆ.