ಮನೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳೋದ್ರಲ್ಲಿ ತಾಯಂದಿರ ಪಾತ್ರ ತುಂಬಾನೇ ಇರುತ್ತೆ. ಪಾತ್ರೆ ತೊಳೆಯೋದ್ರಿಂದ ಹಿಡಿದು ಬಟ್ಟೆ ತೊಳೆದು ಮನೆಯ ನೆಲ ಒರೆಸೋದ್ರ ಮೂಲಕ ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ತಾರೆ. ಇದೇ ಅಮ್ಮಂದಿರು ಮನೆಯ ನಿರ್ವಹಣೆ ಮಾಡೋದಿಲ್ಲ ಅಂತಾ ಪ್ರತಿಭಟನೆಗೆ ಕೂತು ಬಿಟ್ಟರೆ…? ಊಹಿಸಿಕೊಳ್ಳೋದು ಕಷ್ಟ ಅಲ್ಲವಾ..?
ಇದೇ ರೀತಿ ಕೆಲಸ ಮಾಡಿ ಮಾಡಿ ಸುಸ್ತಾದ ತಾಯಿಯೊಬ್ಬರು ಮನೆಯಲ್ಲಿ ಪಾತ್ರೆ ತೊಳೆಯದೇ, ಬಟ್ಟೆ ತೊಳೆಯದೇ ಪ್ರತಿಭಟನೆ ನಡೆಸಿದ್ದು ಮನೆಯ ಅವಸ್ಥೆ ಹೇಗಾಗಿದೆ ಅನ್ನೋದನ್ನ ಫೊಟೋ ತೆಗೆದು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
2 ದಿನಗಳ ಹಿಂದೆ ನಾನು ಮನೆಯಲ್ಲಿ ಪಾತ್ರೆ ತೊಳೆಯೋದನ್ನ ನಿಲ್ಲಿಸಿದೆ. ಮನೆಯಲ್ಲಿ ಅಡುಗೆ ಮಾಡಿದ್ದು ಮಾತ್ರವಲ್ಲದೇ ನಾನೇ ಎಲ್ಲವನ್ನ ಸ್ವಚ್ಛ ಕೂಡ ಮಾಡಬೇಕು ಅಂದರೆ ಸುಸ್ತಾಗುತ್ತಿತ್ತು. ನನ್ನ ಪ್ರತಿಭಟನೆಯಿಂದಾಗಿ ಮನೆಯಲ್ಲಿ ಈ ರೀತಿ ಪಾತ್ರೆ ಹಾಗೂ ಚಮಚಗಳು ರಾಶಿ ಬಿದ್ದಿವೆ ಎಂದು ಟ್ವೀಟಾಯಿಸಿದ್ದಾರೆ.
ನವಜಾತ ಶಿಶುವನ್ನ ಬಿಸಿನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ..!
ಬಟ್ಟೆಗಳ ರಾಶಿ, ಟಾಯ್ಲೆಟ್ ರೂಂನಲ್ಲಿ ಖಾಲಿಯಾದ ಟಿಶ್ಯೂಗಳು, ಸ್ನಾನಗೃಹದಲ್ಲಿ ಖಾಲಿಯಾದ ಕೆಲ ಬಾಟಲಿಗಳು ಹೀಗೆ ಎಲ್ಲಾ ಫೋಟೋವನ್ನ ಮಹಿಳೆ ಶೇರ್ ಮಾಡಿದ್ದಾರೆ. ಅಲ್ಲದೇ ಆಕೆಯ ಪತಿ ಮನೆಯ ಕೆಲಸ ಮಾಡುತ್ತಿರುವ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ಇದಾದ ಬಳಿಕ ಮನೆಯನ್ನ ಸ್ವಚ್ಛಗೊಳಿಸಿದ ಫೋಟೋವನ್ನೂ ಮಹಿಳೆ ಶೇರ್ ಮಾಡಿದ್ದಾರೆ.
ನಾವು ಮನೆಯನ್ನ ಪ್ರೀತಿಯಿಂದ ಸ್ವಚ್ಛವಾಗಿ ಇಟ್ಟುಕೊಳ್ತೇವೆ. ಅಡುಗೆ ಮಾಡೋದು, ಮನೆಯ ಒಳಕ್ಕೆ ಶುದ್ಧ ಗಾಳಿ ಬರುವಂತೆ ವ್ಯವಸ್ಥೆ ಮಾಡೋದು, ಮನೆಯ ವಸ್ತುಗಳನ್ನ ಅಚ್ಚುಕಟ್ಟಾಗಿ ಇಡೋದು ಇವೆಲ್ಲವನ್ನೂ ಮಾಡೋಕೆ ಕಾರಣ ಪ್ರೀತಿ. ಪ್ರೀತಿಗೆ ತಾಳ್ಮೆಯಿದೆ. ಆದರೆ ದಿನಕ್ಕೆ 14 ಗಂಟೆ ಕೆಲಸ ಮಾಡೋದು ಅಂದ್ರೆ ಪ್ರೀತಿಗೂ ಸುಸ್ತಾಗುತ್ತೆ ಎಂದು ಬರೆದುಕೊಂಡಿದ್ದಾರೆ.