ಅಮೆರಿಕದ ಲಸಿಕೆ ತಯಾರಿಕಾ ಸಂಸ್ಥೆಯಾದ ಮಾಡೆರ್ನಾ ಅಮೆರಿಕ ಹಾಗೂ ಯುರೋಪ್ನಲ್ಲಿ ತನ್ನ ಲಸಿಕೆ ಬಳಕೆ ಅಧಿಕೃತ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಿದ್ದೇವೆ ಎಂದು ಹೇಳಿಕೊಂಡಿದೆ.
ಲಸಿಕೆ ಪ್ರಯೋಗ ಹಂತದಲ್ಲಿ 94.1 ಪ್ರತಿಶತದಷ್ಟು ಯಶಸ್ಸನ್ನ ಕಂಡಿದೆ. ಕೆಲವೊಂದು ಗಂಭೀರ ಪ್ರಕರಣಗಳಲ್ಲಂತೂ ಲಸಿಕೆ 100 ಪ್ರತಿಶತದಷ್ಟು ಯಶಸ್ಸನ್ನ ಕಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಅಮೆರಿಕದ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ನಿಂದ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡುವಂತೆ ಮೊಡರೆನಾ ಶೀಘ್ರದಲ್ಲೇ ಅರ್ಜಿ ಸಲ್ಲಿಸಲಿದೆ. ಅಲ್ಲದೇ ಯುರೋಪಿಯನ್ ಮೆಡಿಸಿನ್ ಏಜೆನ್ಸಿಯೊಂದಿಗೂ ಷರತ್ತು ಬದ್ಧ ಮಾರುಕಟ್ಟೆಗೆ ಸಂಸ್ಥೆ ಅನುಮತಿ ಕೇಳಲಿದೆ ಎನ್ನಲಾಗಿದೆ.