ತನ್ನ ಹಣೆಯ ಅಂದದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದ 26 ವರ್ಷದ ಮಾಡೆಲ್ ಒಬ್ಬರು ಅದರ ಸರ್ಜರಿಗೆಂದೇ ಐದು ಸಾವಿರ ಪೌಂಡ್ (5 ಲಕ್ಷ ರೂ.) ವ್ಯಯಿಸಿ, ಹಣೆಯನ್ನು 3 ಸೆಂಮೀ ಇಳಿಸಿಕೊಂಡಿದ್ದಾರೆ.
ಕ್ಯಾಮಿಲ್ಲಾ ಕೋಲ್ಮನ್ ಬ್ರೂಕ್ಸ್ ಹೆಸರಿನ ಈ ಮಾಡೆಲ್ 8.5 ಸೆಂಮೀ ಇದ್ದ ತನ್ನ ಹಣೆಯನ್ನು ಮುಚ್ಚಿಕೊಳ್ಳಲು ದಶಕದ ಕಾಲ ಯತ್ನಿಸಿದ್ದಾರೆ. ಅವರ ಹಣೆ ಸಾಮಾನ್ಯಕ್ಕಿಂತ 2 ಸೆಂಮೀ ಹೆಚ್ಚು ಗಾತ್ರವಿತ್ತು. ಸರ್ಜರಿ ಮಾಡಿಸಿದ ಬಳಿಕ ಅದರ ಗಾತ್ರವೀಗ 5.5 ಸೆಂಮೀಗೆ ಇಳಿದಿದೆ.
ಸರ್ಜರಿ ಆದ ಬಳಿಕ ತನ್ನ ಅಭಿಮಾನಿಗಳೊಂದಿಗೆ ಇತ್ತೀಚಿನ ಫೋಟೋ ಶೇರ್ ಮಾಡಿಕೊಂಡಿರುವ ಕ್ಯಾಮಿಲ್ಲಾ, ಟಿಕ್‌ಟಾಕ್‌ನಲ್ಲಿ ತನ್ನ ಹೊಸ ಲುಕ್ ಹೇಗಿದೆ ಎಂದು ತೋರಿದ್ದಾರೆ.
ಕೂದಲೆಳೆಯಲ್ಲಿ ಡೆಡ್ಲಿ ಸ್ನೇಕ್ ಕಡಿತದಿಂದ ಬಚಾವಾದ ಉರಗ ತಜ್ಞ: ಬೆಚ್ಚಿಬೀಳಿಸುವಂತಿದೆ ವಿಡಿಯೋ
ರಿಡಕ್ಷನ್ ಸರ್ಜರಿ ಎಂದು ಹೇಳಲಾಗುವ ಈ ಶಸ್ತ್ರಚಿಕಿತ್ಸೆಗೆ ಒಳಗಾದ ಈ 26 ವರ್ಷದ ಮಾಡೆಲ್, “ನಾನು ಸಣ್ಣವಳಿದ್ದಾಗ ನನ್ನ ಕೂದಲನ್ನು ನಾನೇ ಸ್ಟೈಲ್ ಮಾಡಿಕೊಳ್ಳುತ್ತಿದ್ದೆ. ಯಾವಾಗಲೂ ನನ್ನ ಹಣೆ ಎಷ್ಟು ದೊಡ್ಡದಾಗಿ ಕಾಣುತ್ತದೆ ಎಂದು ಗಮನಿಸುತ್ತಿದ್ದೆ. ಕಳೆದ ಕೆಲವೊಂದು ವರ್ಷಗಳಿಂದ ನಾನು ಅದನ್ನು ಹ್ಯಾಟ್ ಧರಿಸಿ ಮುಚ್ಚಿಕೊಳ್ಳುತ್ತಿದ್ದೆ. ಸರ್ಜರಿಯಿಂದ ಸಿಕ್ಕ ಫಲಿತಾಂಶಗಳಿಂದ ನನಗೆ ಬಹಳ ಸಂತೋಷವಾಗಿದೆ,” ಎಂದು ಕ್ಯಾಮಿಲ್ಲಾ ತಿಳಿಸಿದ್ದಾರೆ.
“ನನ್ನನ್ನು ಸಂತಸಪಡಿಸಿಕೊಳ್ಳಲು ನನಗೆ ಯಾವುದೇ ಕ್ರಿಯೆ ಬೇಕಿಲ್ಲ, ನಾನು ಈಗ ಹೇಗೆ ಕಾಣುತ್ತಿದ್ದೇನೋ ಹಾಗೆ ಇಷ್ಟ ಪಡುತ್ತೇನೆ,” ಎಂದು ಕ್ಯಾಮಿಲ್ಲಾ ಹೇಳಿದ್ದಾರೆ.
ಇಬ್ಬರು ಮಕ್ಕಳ ತಾಯಿಯಾದ ಕ್ಯಾಮಿಲ್ಲಾಗೆ ಈ ಸರ್ಜರಿ ಮಾಡಿಸಿಕೊಳ್ಳಲು $6,958 ಖರ್ಚಾಗಿದೆ. ಓಹಿಯೋದ ಕ್ಲೀವ್‌ಲ್ಯಾಂಡ್‌ನ ಜೀಬಾ ಕ್ಲಿನಿಕ್‌ನಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಈಕೆ.