ಮೇ 7ರಿಂದ ಕಾಣೆಯಾಗಿದ್ದ ಅಮೆರಿಕದ 69 ವರ್ಷದ ವೃದ್ಧ ಬರೋಬ್ಬರಿ 17 ರಾತ್ರಿಗಳನ್ನ ನಿರ್ಜನ ಕಾಡಿನಲ್ಲಿ ಕಳೆದ ಬಳಿಕ ಇದೀಗ ಪೊಲೀಸರ ಕೈಗೆ ಸಿಕ್ಕಿದ್ದಾನೆ.
ಹ್ಯಾರಿ ಬರ್ಲೆಗ್ ನಾಪತ್ತೆಯಾಗಿದ್ದಾರೆ ಎಂದು ಆತನ ಪತ್ನಿ ಮೇ 7ರಂದು ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದರು. ಹ್ಯಾರಿ ಪ್ರವಾಸವೊಂದಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು ಎಂದು ಪತ್ನಿ ಹೇಳಿದ್ದಾರೆ.
ಮೇ 8ನೇ ತಾರೀಖಿನಂದು ಪೊಲೀಸರು ಹ್ಯಾರಿ ಪತ್ತೆಗಾಗಿ ಶೋಧ ಕಾರ್ಯವನ್ನ ಆರಂಭಿಸಿದ್ರು. ಶೋಧ ಕಾರ್ಯದ ವೇಳೆ ಹ್ಯಾರಿಯ ಕಾರು ಸರೋವರವೊಂದರ ಸಮೀಪದಲ್ಲಿ ಪೊಲೀಸರಿಗೆ ಪತ್ತೆಯಾಯ್ತು. ಹ್ಯಾರಿ ಬರ್ಲೆಗ್ ಮೀನು ಹಿಡಿಯುವ ಸಲುವಾಗಿ ಈ ಟ್ವಿನ್ ಸರೋವರ ಪ್ರದೇಶಕ್ಕೆ ಟ್ರೆಕ್ಕಿಂಗ್ಗೆ ಬಂದಿದ್ದರು ಅನ್ನೋದು ವಿಚಾರಣೆ ವೇಳೆ ತಿಳಿದು ಬಂದಿದೆ.
40 ಮಂದಿಯನ್ನ ಹೊಂದಿದ್ದ 8 ಕೌಂಟಿಯು ಹ್ಯಾರಿಗಾಗಿ ಶೋಧ ಕಾರ್ಯ ನಡೆಸಿತ್ತು. ಹ್ಯಾರಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನ ಫೇಸ್ಬುಕ್ನ ಸಹಾಯವನ್ನೂ ಪಡೆದಿದ್ದರು. ಬರೋಬ್ಬರಿ 16 ದಿನಗಳ ಕಾರ್ಯಾಚರಣೆಯ ಬಳಿಕ ಪೊಲೀಸರು ಅರಣ್ಯದಲ್ಲಿ ಹ್ಯಾರಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.