ಮನೆಯಲ್ಲಿರುವ ನಾಯಿಗಳು ಮಾಡುವ ಒಂದೊಂದು ತುಂಟಾಟಗಳು ನೋಡುವುದಕ್ಕೆ ಚೆಂದ. ಆದರೆ ಇಲ್ಲೊಂದು ಬುದ್ಧಿವಂತ ಶ್ವಾನ, ಮನೆಯಲ್ಲಿ ವೃದ್ಧೆ ಹಾಕಿಕೊಳ್ಳುತ್ತಿದ್ದ ಹಲ್ಲಿನ ಸೆಟ್ ಹಾಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಹೌದು, ಯುವತಿಯೊಬ್ಬರು ತಮ್ಮ ಮನೆಯಲ್ಲಿರುವ ಶ್ವಾನದ ಕಿಡಿಗೇಡಿತನದ ವಿಡಿಯೋವನ್ನು ಹಾಕಿದ್ದಾರೆ. ಸ್ಟಸೀ ಒವೆನ್ ಅವರ ಮನೆಯಲ್ಲಿರುವ ಮಿಲೋ ಎನ್ನುವ ಶ್ವಾನ, ಮನೆಯಲ್ಲಿ ಸದ್ದು ಮಾಡದೇ ಸುಮ್ಮನೆ ಕೂತಿರುವುದನ್ನು ನೋಡಿ ಯುವತಿ ಹುಡುಕಿದಾಗ, ಆಕೆಗೆ ಅಚ್ಚರಿ ಕಾದಿತ್ತು. ಸ್ಟಸೀ ಅವರ ತಾಯಿಯ ಕೋಣೆಯಲ್ಲಿ ಸುಮ್ಮನೆ ಕೂತಿದ್ದ ಶ್ವಾನ, ಅಲ್ಲಿ ಅವರ ಹಲ್ಲಿನ ಸೆಟ್‌ನ್ನು ಹಾಕಿಕೊಂಡು ಕೂತಿತ್ತು.
ಕೂಡಲೇ ಶ್ವಾನದ ವಿಡಿಯೋ ಮಾಡಿರುವ ಯುವತಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಶ್ವಾನ ನೀಡಿರುವ ಫೋಸ್ ನ್ನು ನೋಡಿದರೆ ಕ್ಯಾಮರಾಗೆ ನಗುಮೊಗದ ಸ್ವಾಗತವನ್ನು ನೀಡಿದಂತೆ ಭಾಸವಾಗುತ್ತದೆ. ಈ ವಿಡಿಯೋವನ್ನು ನೋಡುತ್ತಿದ್ದಂತೆ, ನೆಟ್ಟಿಗರು ಹಾಗೂ ಶ್ವಾನಪ್ರಿಯರು ಫುಲ್ ಖುಷ್ ಆಗಿದ್ದು ನಾಯಿಯ ಬುದ್ಧಿವಂತಿಕೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 3.9 ಲಕ್ಷ ಮಂದಿ ವೀಕ್ಷಿಸಿದ್ದು, 6700ಕ್ಕೂ ಹೆಚ್ಚು ಶೇರ್ ಹಾಗೂ 2100 ಕಾಮೆಂಟ್‌ಗಳು ಬಂದಿವೆ.
https://www.facebook.com/stacie.j.owen/videos/10157085741930988/?t=13