ಐದು ಕಟ್ಟಡಗಳನ್ನು ಹೊಂದಿದ್ದರೂ ಸಹ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಈಜಿಪ್ಟ್ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆಕೆಗೆ ಸೇರಿದ 3 ದಶಲಕ್ಷ ಈಜಿಪ್ಷಿಯನ್ ಪೌಂಡ್ (1.4 ಕೋಟಿ ರೂ.ಗಳು) ಪೊಲೀಸರ ಕೈಸೇರಿದೆ.
ನಫೀಸಾ ಹೆಸರಿನ 57 ವರ್ಷದ ಈ ಮಹಿಳೆ ಗಾಲಿ ಕುರ್ಚಿ ಮೇಲೆ ಕುಳಿತುಕೊಂಡು, ತನಗೆ ಪೆರಾಲಿಸಿಸ್ ಆಗಿದೆ ಎಂದು ಹೇಳಿಕೊಂಡು ಭಿಕ್ಷೆ ಬೇಡುತ್ತಿದ್ದಳು. ಆದರೆ ಆಕೆ ಚೆನ್ನಾಗಿಯೇ ನಡೆಯುತ್ತಿದ್ದದ್ದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ.
ಆದರೆ ಆಕೆಗೆ ಯಾವುದೇ ರೋಗವಿಲ್ಲವೆಂದೂ ದೊಡ್ಡ ಮಟ್ಟದಲ್ಲಿ ಆಸ್ತಿ ಹೊಂದಿರುವುದಾಗಿಯೂ ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ. ಇದೀಗ ನಫೀಸಾಳನ್ನು ನ್ಯಾಯಾಲಯದ ಮುಂದೆ ಹೆಚ್ಚಿನ ವಿಚಾರಣೆಗಾಗಿ ಹಾಜರುಪಡಿಸಲಾಗಿದೆ.