ವಾಷಿಂಗ್ಟನ್: ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಬೆಂಬಲ ನೀಡುವ ಸಲುವಾಗಿ ಅಮೆರಿಕ ಸೇನೆ ರವಾನೆ ಮಾಡಲಾಗುವುದು.
ಈಗಾಗಲೇ 3 ಯುದ್ಧನೌಕೆಗಳನ್ನು ಕಳುಹಿಸಿದ ಅಮೆರಿಕ ಭಾರತ ಬೆಂಬಲಕ್ಕೆ ಸೇನೆಯನ್ನು ರವಾನಿಸಲಿದೆ. ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪೆ ಈ ಕುರಿತು ಮಾತನಾಡಿ, ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳು ಚೀನಾದಿಂದ ಎದುರಿಸುತ್ತಿರುವ ಸಮಸ್ಯೆ ಸವಾಲುಗಳ ಹಿನ್ನೆಲೆಯಲ್ಲಿ ಅಮೆರಿಕ ಸೇನೆಯನ್ನು ಯುರೋಪ್ ಬದಲು ಬೇರೆ ದೇಶಗಳಿಗೆ ಕಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಇದೇ ಮೊದಲ ಸಲ ಚೀನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಬೆಂಬಲವಾಗಿ ನಿಂತಿರುವ ಕುರಿತು ಅಮೆರಿಕ ಬಹಿರಂಗವಾಗಿ ಹೇಳಿಕೆ ನೀಡಿ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದೆ.