ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಕೇವಲ ತಮ್ಮ ಪಾಕಕಲೆ ಮಾತ್ರವಲ್ಲದೇ ಮಾನವೀಯ ಕಾರ್ಯಗಳಿಂದಲೂ ಎಲ್ಲೆಡೆ ಹೆಸರು ಮಾಡಿದ್ದಾರೆ.
ವಲಸೆಗಾರರ ವಿರುದ್ಧ ಅಮೆರಿಕದ ಸೆನೆಟರ್ ಒಬ್ಬರು ನೀಡಿದ ಅಸಹನೀಯ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದ ಖನ್ನಾ ದೇಸೀ ನೆಟ್ಟಿಗರ ಮನಗೆದ್ದಿದ್ದಾರೆ. ಡೆಲವೇರ್ ರಾಜ್ಯದ ಸೆನೆಟರ್ ಲೌರೆನ್ ವಿಟ್ಝ್‌ಕೀ ಮಾತನಾಡಿ, “ಮೂರನೇ ಜಗತ್ತಿನಿಂದ ಬರುವ ಬಹುತೇಕ ಜನರು ನಾಗರಿಕ ಸಮಾಜಗಳೊಂದಿಗೆ ಒಗ್ಗಿಕೊಂಡು ಹೋಗಲಾರರು” ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಖನ್ನಾ ಅಮೆರಿಕದಲ್ಲಿ ತಾವು ಮಾಡಿರುವ ಸಾಧನೆಗಳು ಹಾಗೂ ತಮಗೆ ಸಂದಿರುವ ಸನ್ಮಾನಗಳ ಪರಿಚಯ ಮಾಡಿಕೊಟ್ಟಿದ್ದಾರೆ.
“ಎಲೆನಾರ್ ರೂಸ್‌ವೆಲ್ಟ್ ಪ್ರಶಸ್ತಿಯಿಂದ ಹಿಡಿದು ಬೆಂಝಮಿನ್ ಫ್ರಾಂಕ್ಲಿನ್ ಪ್ರಶಸ್ತಿವರೆಗೆ ಸ್ವೀಕರಿಸಿರುವುದಲ್ಲದೇ, ಮೈಕೆಲಿನ್ ಸ್ಟಾರ್‌ನಿಂದ ಜೇಮ್ಸ್ ಬರ್ಡ್ ನಾಮ್‌ನಿಂದ ಹಿಡಿದು 2020ರ ಆಸ್ಕರ್ ಅರ್ಹತೆಯವರೆಗೂ, ನ್ಯೂಯಾರ್ಕ್‌ನ ಹಾಟೆಸ್ಟ್ ಶೆಫ್ ಆಗಿದ್ದಲ್ಲದೇ, ನ್ಯೂಯಾರ್ಕ್ ಟೈಮ್ಸ್‌ನ ಕವರ್‌ನಲ್ಲಿ ಕಾಣಿಸಿಕೊಳ್ಳುವವರೆಗೂ ಜೊತೆಗೆ ಮೂವರು ಅಧ್ಯಕ್ಷರಿಗೆ ಅಡುಗೆ ಮಾಡಿದ್ದಲ್ಲದೇ ಅನೇಕ ಪ್ರಕಟಣೆಗಳನ್ನು ಕಂಡಿರುವವರೆಗೂ” ಎಂದು ಟ್ವೀಟ್ ಮೂಲಕ ತಿಳಿಸಿರುವ ಖನ್ನಾಗೆ, ದೇಸೀ ನೆಟ್ಟಿಗರಿಂದ ಭಾರೀ ಬೆಂಬಲದ ಮಹಾಪೂರವೇ ಹರಿದುಬಂದಿದೆ.
https://twitter.com/viet_t_nguyen/status/1314774482754494469?ref_src=twsrc%5Etfw%7Ctwcamp%5Etweetembed%7Ctwterm%5E1314774482754494469%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fmic-drop-moment-chef-vikas-khannas-befitting-reply-to-an-anti-immigrant-remark-lauded-by-desi-netizens%2F666128
https://twitter.com/TheVikasKhanna/status/1314937341597937665?ref_src=twsrc%5Etfw%7Ctwcamp%5Etweetembed%7Ctwterm%5E1314937341597937665%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fmic-drop-moment-chef-vikas-khannas-befitting-reply-to-an-anti-immigrant-remark-lauded-by-desi-netizens%2F666128