
ಹುಟ್ಟುಹಬ್ಬವನ್ನು ವಿಶೇಷ ಮತ್ತು ವಿಭಿನ್ನವಾಗಿ ಆಚರಿಸಿಕೊಳ್ಳಲು ಸಮುದ್ರಕ್ಕಿಳಿದಾಕೆಗೆ ಅವಿಸ್ಮರಣೀಯ ಅನುಭವ ಆಗಿದೆ.
ಐಸೋ ಮಚಾಡೋ ಎಂಬಾಕೆ ಹುಟ್ಟುಹಬ್ಬವನ್ನು ವಿಹಾರನೌಕೆಯಲ್ಲಿ ಆಚರಿಸಲು ನಿರ್ಧರಿಸಿ, ಬಹಮಾಸ್ ನಲ್ಲಿ ತನ್ನ ಗೆಳೆಯರು, ಕುಟುಂಬ ಸದಸ್ಯರೊಂದಿಗೆ ನೌಕೆ ಏರಿದ್ದಾಳೆ.
ಸ್ವಲ್ಪ ದೂರದ ಪ್ರಯಾಣದ ನಂತರ ಸಮುದ್ರಕ್ಕಿಳಿದು ಈಜಬೇಕು ಅನ್ನಿಸಿದೆ. ಅಂದುಕೊಂಡಂತೆಯೇ ಸಮುದ್ರದ ನೀರಿಗೆ ಇಳಿಯುತ್ತಾಳೆ.
ಇದನ್ನು ಸ್ನೇಹಿತರು ವಿಡಿಯೋ ಮಾಡುತ್ತಿರುತ್ತಾರೆ. ಆಕೆ ನೌಕೆಯಿಂದ ನೀರಿಗಿಳಿಯುತ್ತಿದ್ದಂತೆ ಪಕ್ಕದಲ್ಲೇ ಬರೋಬ್ಬರಿ 8 ಅಡಿ ಉದ್ದದ ಶಾರ್ಕ್ ಕಾಣಿಸಿಕೊಂಡಿದೆ. ಇದನ್ನು ಕಂಡ ಎಲ್ಲರೂ ಶಾಕ್ ಆಗಿದ್ದಾರೆ. ಆದರೆ, ಐಸೋ ಮಚಾಡೋ ಮಾತ್ರ ನೋಡಿಯೋ ನೋಡದಂತೆ ನಿರಾತಂಕವಾಗಿ ವಿಹರಿಸುತ್ತಿದ್ದಾಳೆ.
ಮಚಾಡೋ ಹತ್ತಿರ ಹತ್ತಿರ ಶಾರ್ಕ್ ಹೋದಷ್ಟು ನೌಕೆಯಲ್ಲಿದ್ದವರೆಲ್ಲ ಗಾಬರಿಯಾಗಿ ಓ ಮೈ ಗಾಡ್, ಓ ಮೈ ಗಾಡ್ ಎನ್ನಲಾರಂಭಿಸಿದ್ದಾರೆ. ಆದರೆ, ಶಾರ್ಕ್ ತನ್ನನ್ನು ಗಮನಿಸಿಲ್ಲ ಎಂಬುದು ಖಚಿತವಾದ್ದರಿಂದ ಮಚಾಡೋ ಆರಾಮವಾಗಿ ಈಜಿ, ನೌಕೆಯನ್ನೇರಿದ್ದಾಳೆ.