
ಕೊರೋನಾ ಮಹಾಮಾರಿ ವಿಶ್ವಕ್ಕೆ ಅಪ್ಪಳಿಸಿದ ದಿನದಿಂದಲೂ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡರು. ಅದರಲ್ಲೂ ಕಲಾ ಕ್ಷೇತ್ರದಲ್ಲಿರುವ ಅನೇಕರು ಕೆಲಸ ಇಲ್ಲದೇ ಮನೆಯಲ್ಲೇ ಜೀವನ ದೂಡುವಂತಾಗಿದೆ.
ಇದೀಗ ಮೆಕ್ಸಿಕೋದ ಅನೇಕ ಕಲಾವಿದರೂ ಜೀವನ ಸಾಗಿಸಲು, ವಾದ್ಯಗಳೊಂದಿಗೆ ಬೀದಿಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಲಾಕ್ ಡೌನ್‌ನಿಂದ ಸಂಗೀತ ಕಾರ್ಯಕ್ರಮ, ಹೋಟೆಲ್, ಪಬ್, ರೆಸ್ಟೋರೆಂಟ್ ಬಂದ್ ಆಗಿರುವುದರಿಂದ ಈ ರೀತಿ ಮಾಡಬೇಕಾಗಿದೆ ಎನ್ನಲಾಗಿದೆ.
ಖಾಲಿ ರಸ್ತೆಗಳಲ್ಲಿ ಪಾಪ್, ರಾಕ್ ಸೇರಿದಂತೆ ವಿವಿಧ ಪ್ರಕಾರದ ಸಂಗೀತವನ್ನು ಕಲಾವಿದರು ನುಡಿಸುತ್ತಿದ್ದು, ಜನರು ಬಾಲ್ಕನಿಯಲ್ಲಿ ನಿಂತುಕೊಂಡೇ ಆನಂದಿಸುತ್ತಿದ್ದಾರೆ. ಇನ್ನು ಕೆಲವರು ತಮಗೆ ಬೇಕಾದ ಹಾಡನ್ನು ನುಡಿಸಲು ಹೇಳಿ ಟಿಪ್ಸ್ ನೀಡುತ್ತಿದ್ದಾರೆ ಎಂದು ಕಲಾವಿದರೊಬ್ಬರು ಹೇಳಿದ್ದಾರೆ
ಈಗಾಗಲೇ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದು, ಹೋಟೆಲ್ ಗಳೆಲ್ಲ ಆರಂಭವಾಗುವ ತನಕ ಇದು ಅನಿರ್ವಾಯ. ಈ ರೀತಿ ಮಾಡುವುದರಿಂದ ನಮ್ಮ ಹೊಟ್ಟೆಯೂ ತುಂಬುತ್ತದೆ ಹಾಗೂ ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದಿರುವ ಜನರಿಗೂ ಮನೋರಂಜನೆ ಸಿಗುತ್ತದೆ ಎಂದಿದ್ದಾರೆ.