alex Certify ಪ್ರತಿಭಟನಾಕಾರರಿಗೆ ಪುಶ್‌-ಅಪ್ ಚಾಲೆಂಜ್ ಕೊಟ್ಟ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನಾಕಾರರಿಗೆ ಪುಶ್‌-ಅಪ್ ಚಾಲೆಂಜ್ ಕೊಟ್ಟ ಪೊಲೀಸ್

ಪ್ರತಿಭಟನೆಗಳು ನಡೆಯುವ ವೇಳೆ ಜನರಲ್ಲಿ ಸರಿಯಾದ ಸ್ಪಿರಿಟ್ ಇಲ್ಲದೇ ಇದ್ದಲ್ಲಿ ಹಿಂಸಾಚಾರದ ಸ್ವರೂಪಕ್ಕೆ ಹೋರಾಟಗಳು ತಿರುಗಿಬಿಡುವ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ.

ಇಂಥ ಸಮಯದಲ್ಲಿ ಕೆಲವೊಂದು ಸಜ್ಜನ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಲ್ಲಿ ಸಕಾರಾತ್ಮಕ ಮನೋಭಾವ ಮೂಡಿಸಲು ಮುಂದಾಗುವ ವರದಿಗಳನ್ನು ಓದಿದ್ದೇವೆ. ಇಂಥದ್ದೇ ಒಂದು ನಿದರ್ಶನ ನ್ಯೂ ಮೆಕ್ಸಿಕೋ ಸಿಟಿಯಲ್ಲಿ ಘಟಿಸಿದೆ.

ಕೋವಿಡ್-19 ಲಾಕ್‌ಡೌನ್‌ನಿಂದ ಜಿಮ್‌ಗಳನ್ನು ಮತ್ತೆ ಆರಂಭಿಸಲು ಅನುಮತಿ ಕೊಡಬೇಕೆಂದು ಜಿಮ್ ಟ್ರೇನರ್‌ಗಳು ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ, ಪ್ರತಿಭಟನಾಕಾರರಲ್ಲಿ ಪಾಸಿಟಿವ್‌ ಎನರ್ಜಿ ಮೂಡಿಸಲು ಮುಂದಾದ ಪೊಲೀಸ್ ಅಧಿಕಾರಿಯೊಬ್ಬರು ಅವರಿಗೆ ಪುಶ್-ಅಪ್ ಚಾಲೆಂಜ್ ಒಂದನ್ನು ನೀಡಿದರು.‌ ಈ ಚಾಲೆಂಜ್‌ನಿಂದ ಅಲ್ಲಿದ್ದ ವಾತಾವರಣದ ಜೋಶ್‌ ಇನ್ನಷ್ಟು ಹೆಚ್ಚಿದ್ದನ್ನು ಕಂಡ ನೆಟ್ಟಗರು ಫುಲ್ ಖುಷಿಯಾಗಿ ಒಳ್ಳೊಳ್ಳೆ ಕಾಮೆಂಟ್‌ಗಳನ್ನು ಹಾಕಿದ್ದಾರೆ.

https://twitter.com/sagar_kalsi/status/1279282107714396163?ref_src=twsrc%5Etfw%7Ctwcamp%5Etweetembed%7Ctwterm%5E1279282107714396163%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fmexican-cop-and-gym-trainer-get-into-a-push-up-challenge-netizens-loving-the-josh-watch%2F617027

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...