
ಸ್ವಿಜರ್ಲ್ಯಾಂಡ್ ನಲ್ಲಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಅಂದಾಜು 4 ದಶಲಕ್ಷ ಡಾಲರ್ ನಷ್ಟು ನಷ್ಟ ಸಂಭವಿಸಿದೆ.
ಅಪಘಾತ ಸಂಭವಿಸಿರುವುದು ಅಂತಿಂತಹ ವಾಹನಗಳ ಮಧ್ಯೆ ಅಲ್ಲ. ಜಗತ್ತಿನ ಐಷಾರಾಮಿ ಹಾಗೂ ದುಬಾರಿ ಬೆಲೆಯ ಮರ್ಸಿಡಿಸ್, ಬುಗಾಟ್ಟಿ, ಪೋರ್ಶ್ ನಡುವೆ.
ಡಿಕ್ಕಿಯ ರಭಸಕ್ಕೆ ಒಂದೊಂದು ಕಾರೂ ನಜ್ಜುಗುಜ್ಜಾಗಿ ಚೆಲ್ಲಾಪಿಲ್ಲಿಯಾಗಿ ಬೇರೆ ಬೇರೆ ದಿಕ್ಕುಗಳಿಗೆ ಮುಖ ಮಾಡಿ ನಿಂತುಬಿಟ್ಟಿವೆ. ಯಾವ ಕಾರು ಯಾವ ಕಾರಿಗೆ ಗುದ್ದಿದೆ ಎಂಬುದೇ ಗೊತ್ತಾಗಿಲ್ಲ.
ಸ್ಥಳ ಪರಿಶೀಲನೆ ನಡೆಸಿದ ಕೆಂಟಾನ್ ಉರಿ ಪೊಲೀಸರು, ಪಿಕ್ಚರ್ಸ್ ಕ್ಯು ಪಾಸ್ ನಲ್ಲಿ ಘಟನೆ ನಡೆದಿದ್ದು, ನಿಧಾನವಾಗಿ ಚಲಿಸುತ್ತಿದ್ದ ವಾಹನ ಹಿಂದಿಕ್ಕಲು ಹೋಗಿ ಅಪಘಾತ ಸಂಭವಿಸಿದೆ. ಒಂದೊಂದು ಕಾರಿನ ಬೆಲೆಯೂ ಕಡಿಮೆಯೇನಿಲ್ಲ. ಒಟ್ಟಾರೆ ದುರಂತದಲ್ಲಿ 4 ದಶಲಕ್ಷ ಡಾಲರ್ ನಷ್ಟ ಆಗಿದೆ ಎಂದಿದ್ದಾರೆ.
https://www.facebook.com/Rainierjohnsonsupercars/posts/2428621810772022