ನೀವು ಬೆಕ್ಕುಗಳ ಪ್ರೇಮಿಯಾಗಿದ್ದಲ್ಲಿ ಜಪಾನ್ ನ ಈ ದೇವಸ್ಥಾನಕ್ಕೆ ನೀವೊಮ್ಮೆ ಭೇಟಿ ನೀಡಬೇಕು. ನ್ಯಾನ್ ನ್ಯಾನ್ ಜಿ ಹೆಸರಿನ ಈ ದೇಗುಲವನ್ನು ಮಿಯಾವ್ ಮಿಯಾವ್ ದೇಗುಲ ಎಂದೂ ಕರೆಯಲಾಗುತ್ತದೆ.
ಈ ದೇಗುಲವು ಜಪಾನ್‌ನ ಕ್ಯೋಟೋದಲ್ಲಿ ಇದ್ದು, ಬೆಕ್ಕುಗಳೇ ಇಲ್ಲಿನ ಪ್ರಧಾನ ಅರ್ಚಕರು ಹಾಗೂ ಸಹಾಯಕರ ಪಾತ್ರ ನಿರ್ವಹಿಸುತ್ತವೆ. ಕೊಯುಕಿ ಹೆಸರಿನ ಬೆಕ್ಕು ಈ ದೇವಸ್ಥಾನದ ಪ್ರಧಾನ ಅರ್ಚಕನಾಗಿದ್ದು, ಇಲ್ಲಿಗೆ ಬರುವ ಭಕ್ತಗಣದೊಂದಿಗೆ ಸಂವಾದ ನಡೆಸುವುದು ಈಕೆಗೆ ಬಲೇ ಅಚ್ಚುಮೆಚ್ಚಂತೆ.
ಬೆಕ್ಕುಗಳ ಈ ದೇವಸ್ಥಾನವನ್ನು 2016ರಲ್ಲಿ ಪೇಂಟರ್ ಟೋರು ಕಾಯಾ ತಮ್ಮ ಮೆಚ್ಚಿನ ಪ್ರಾಣಿಯ ಥೀಮ್ ಆಧರಿಸಿ ಆರಂಭಿಸಿದ್ದಾರೆ. ದೇವಸ್ಥಾನದಲ್ಲಿ ಬೆಕ್ಕುಗಳ ಮೂರ್ತಿಗಳು ಹಾಗೂ ಚಿತ್ರಗಳು ಇವೆ.