ಮಾಸಿಕ ಋತುಸ್ರಾವದ ವೇದನೆ ಅರ್ಥ ಮಾಡಿಕೊಂಡರೆ ಹೆಂಗಸರ ಕಷ್ಟಗಳ ಪರಿ ಎಂಥದ್ದು ಎಂಬ ಅರಿವಾಗಿ ಅವರ ಮೇಲೆ ಇನ್ನಷ್ಟು ಗೌರವ ಹೆಚ್ಚಾಗುತ್ತದೆ. ಇದೀಗ ಈ ವಿಚಾರವನ್ನು ಪ್ರಾಕ್ಟಿಕಲ್ ಆಗಿ ಅರ್ಥೈಸಲೆಂದೇ ಋತುಸ್ರಾವದ ಸಿಮ್ಯೂಲೇಷನ್ ಅನುಭವ ಕೊಡುವ ವಿಡಿಯೋ ಒಂದು ವೈರಲ್ ಆಗಿದೆ.
’ಪೀರಿಯಡ್ ಕ್ರಾಂಪ್ ಸಿಮ್ಯೂಲೇಟರ್’ ಹೆಸರಿನ ಈ ಸಾಧನದ ಮೂಲಕ ಋತುಸ್ರಾವದ ವೇಳೆ ಎಷ್ಟು ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂಬ ಅನುಭವವನ್ನು ಗಂಡಸರು ಕಂಡುಕೊಳ್ಳುತ್ತಿದ್ದಾರೆ.
ಕೊರೊನಾ ಲಕ್ಷಣ ಕಂಡುಬಂದರೆ ಏನು ಮಾಡಬೇಕು…? ಏನು ಮಾಡಬಾರದು….? ಡಾ. ರಾಜು ಅವರಿಂದ ಮಹತ್ವದ ಸಲಹೆ
ಹುಡುಗಿಯರ ತಂಡವೊಂದು ಈ ಸಾಧನವನ್ನು ಬಳಸಿಕೊಂಡು ಋತುಸ್ರಾವದ ಅನುಭವವೇನೆಂದು ಅರಿಯಬಲ್ಲಿರಾ ಎಂದು ಪುರುಷರನ್ನು ಚಾಲೆಂಜ್ ಮಾಡುತ್ತಿರುವ ಈ ವಿಡಿಯೋದಲ್ಲಿ, ತಿಂಗಳ ಆರಂಭದ ದಿನಗಳಲ್ಲಿ ತಮಗೆಂಥಾ ಯಾತನೆಯಾಗುತ್ತದೆ ಎಂದು ತಿಳಿಸಲು ಮುಂದಾಗಿದ್ದಾರೆ.
ಕ್ಲಾರಾ ಜೆಫ್ರಿ ಹೆಸರಿನ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋ ಬಹಳ ವೀವ್ಸ್ ಹಾಗೂ ರೀಟ್ವೀಟ್ಸ್ ಪಡೆದುಕೊಂಡಿದೆ.
https://twitter.com/ClaraJeffery/status/1390527311003348993?ref_src=twsrc%5Etfw%7Ctwcamp%5Etweetembed%7Ctwterm%5E1390527311003348993%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fmen-try-a-period-cramp-stimulator-to-see-what-women-go-through-during-that-time-of-the-month%2F754356