alex Certify ಕೊರೊನಾ ಆಂಟಿಬಾಡಿ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಆಂಟಿಬಾಡಿ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿನ ಪ್ರಮಾಣದ ಕರೊನಾ ಆಂಟಿ ಬಾಡಿ ಉತ್ಪಾದನೆ ಆಗುತ್ತೆ ಅಂತಾ ಪೋರ್ಚುಗೀಸ್​ ಸಂಶೋಧನೆಯೊಂದು ವರದಿ ನೀಡಿದೆ. ಅದರಲ್ಲೂ ಶೇ. 90ರಷ್ಟು ಪುರುಷ ರೋಗಿಗಳು ಕರೊನಾದಿಂದ ಗುಣಮುಖರಾದ 7 ತಿಂಗಳುಗಳವರೆಗೂ ಕರೊನಾ ಆಂಟಿಬಾಡಿಗಳನ್ನ ಉತ್ಪಾದನೆ ಮಾಡುವಲ್ಲಿ ಶಕ್ತರಾಗಿರುತ್ತಾರೆ ಅಂತಾ ಹೇಳಲಾಗಿದೆ.

ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಗಳು ಕರೊನಾ ವೈರಸ್​ ದೇಹಕ್ಕೆ ಪ್ರವೇಶಿಸ್ತಾ ಇದ್ದಂತೆ ಅದನ್ನ ತಡೆಯುವ ಪ್ರತಿಕಾಯಗಳನ್ನ ಸೃಷ್ಟಿಸೋಕೆ ಆರಂಭಿಸುತ್ವೆ. ಈ ಪ್ರತಿಕಾಯಗಳು ಕರೊನಾದ ವಿರುದ್ಧ ಹೋರಾಟ ನಡೆಸುತ್ತವೆ.

300 ಆಸ್ಪತ್ರೆಗಳಲ್ಲಿನ ಕರೊನಾ ರೋಗಿಗಳಲ್ಲಿ ಹುಟ್ಟಿಕೊಳ್ಳುವ ಕರೊನಾ ಆಂಟಿಬಾಡಿ ಬಗ್ಗೆ ಸುಮಾರು 6 ತಿಂಗಳುಗಳ ಕಾಲ ಸಮೀಕ್ಷೆ ನಡೆಸಲಾಯ್ತು. ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಮೊದಲ ಮೂರು ವಾರ ದೇಹ ತನ್ನ ಕೈಮೀರಿ ಪ್ರತಿಕಾಯಗಳನ್ನ ಉತ್ಪಾದನೆ ಮಾಡುತ್ತೆ. ಕ್ರಮೇಣವಾಗಿ ಈ ಪ್ರತಿಕಾಯಗಳ ಉತ್ಪಾದನಾ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ.

ಮೊದಲ ಮೂರು ವಾರಗಳಲ್ಲಿ ಪುರುಷರ ದೇಹ ಮಹಿಳೆಯರಿಗಿಂತ ಹೆಚ್ಚು ಆಂಟಿಬಾಡಿಗಳನ್ನ ಉತ್ಪಾದನೆ ಮಾಡುತ್ತೆ. ಕ್ರಮೇಣವಾಗಿ ಈ ಪ್ರತಿಕಾಯಗಳ ಮಟ್ಟ ಸರಿಸಮವಾಗುತ್ತಾ ಹೋಗುತ್ತದೆ ಅಂತಾ ಸಂಶೋಧಕ ವೆಲ್ಡೊವಿನ್​ ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...