ಪ್ಯಾಲಸ್ಟೇನಿಯಾದ ಗಾಜಾ ಪ್ರದೇಶದಲ್ಲಿ ವಾಸಿಸುತ್ತಿರುವ 5 ಮಕ್ಕಳ ತಾಯಿ ನಾಯ್ಲಾ ಅಬು ಜಿಬ್ಬಾ ದೇಶದ ಮೊದಲ ಟ್ಯಾಕ್ಸಿ ಡ್ರೈವರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 39 ವರ್ಷದ ಜಿಬ್ಬಾ ಟ್ಯಾಕ್ಸಿ ಡ್ರೈವರ್ ಆಗುವ ಮೂಲಕ ತಮ್ಮ ಕುಟುಂಬವನ್ನ ನಡೆಸುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಜಿಬ್ಬಾ, ತನ್ನ ಕೆಲಸದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದೇನೆ. ಆದರೆ ನನ್ನನ್ನ ಹುರಿದುಂಬಿಸುವವರ ಸಂಖ್ಯೆಯೇ ಜಾಸ್ತಿ ಇದೆ ಅನ್ನೋದನ್ನ ಕಡೆಗಣಿಸುವ ಹಾಗಿಲ್ಲ. ಅನೇಕರು ಮಹಿಳಾ ಚಾಲಕರು ಹೆಚ್ಚು ಅಪಘಾತ ಮಾಡುತ್ತಾರೆ ಅಂತಾ ಹೇಳ್ತಾರೆ. ಆದರೆ ವಾಸ್ತವದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಗರೂಕ ಚಾಲಕರಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಜಿಬ್ಬಾ ಟ್ಯಾಕ್ಸಿ ಚಾಲನೆ ಬಗ್ಗೆ ಮಾತನಾಡಿದ ಗ್ರಾಹಕ ಅಬು ಅಟೀಲಾ, ಜಿಬ್ಬಾ ಟ್ಯಾಕ್ಸಿ ಓಡಿಸುವಾಗ ನಾವು ನಿಶ್ಚಿಂತೆಯಿಂದ ಇರುತ್ತೇವೆ ಅಂತಾ ಹೇಳಿದ್ದಾರೆ, ಗಾಜಾದಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 49ರಷ್ಟಿದೆ. ಪದವೀಧರೆಯಾದರೂ ಉದ್ಯೋಗ ಪಡೆಯುವಲ್ಲಿ ವಿಫಲರಾದ ಜಿಬ್ಬಾ. ಧೃತಿಗೆಡದೇ ಜೀವನೋಪಾಯಕ್ಕೆ ಈ ಹೊಸ ಮಾರ್ಗ ಕಂಡುಕೊಂಡಿದ್ದಾರೆ.