alex Certify ವೃದ್ಧೆಯ ರ್ಯಾಪ್​ ಸಾಂಗ್​ಗೆ ಅಮೆರಿಕನ್ನರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧೆಯ ರ್ಯಾಪ್​ ಸಾಂಗ್​ಗೆ ಅಮೆರಿಕನ್ನರು ಫಿದಾ

ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲ್ಲ ಎಂಬ ಮಾತು 69 ವರ್ಷದ ಈ ಮಹಿಳೆಗೆ ಹೇಳಿ ಮಾಡಿಸಿದಂತಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಅಲ್ಫೋನ್ಸೋ ಹೆಸರಿನ ಈ ವೃದ್ಧೆ ನಿತ್ಯ ಬಸ್​ನಲ್ಲಿ ಸಂಗೀತಗೋಷ್ಠಿ ನಡೆಸುತ್ತಾರೆ.

ಹಾಸ್ಯಮಯ ಸಾಹಿತ್ಯವನ್ನ ಹೊಂದಿರುವ ಈಕೆಯ ಹಾಡುಗಳು ಪ್ರಯಾಣಿಕರನ್ನ ರಂಜಿಸುತ್ತೆ. ನಾನು ನನ್ನಿಂದಾದ ಪ್ರಯತ್ನ ಮಾಡಿದ್ದೇನೆ. ನಿಮಗೆ ಹಣ ನೀಡೋಕೆ ಸಾಧ್ಯವಾಗದೇ ಇದ್ದರೆ ಒಂದು ಕಿಸ್​ ನೀಡಿ ಅಂತಾರೆ ಅಲ್ಫೋನ್ಸೋ.

ವೆಜಿಜುವೆಲಾದಿಂದ ಕೊಲಂಬಿಯಾಗೆ ವಲಸೆ ಬಂದಿರುವ ಈ ವೃದ್ಧೆ ನಿತ್ಯ ಸರಿಸುಮಾರು 8 ಡಾಲರ್​ ರೂಪಾಯಿ ಗಳಿಸುತ್ತಾರಂತೆ. ಗ್ಲುಕೋಮಾದಿಂದ ಬಳಲುತ್ತಿರುವ ಅಲ್ಫೊನ್ಸೋಗೆ ಎಡಗಣ್ಣು ಕಾಣುವುದಿಲ್ಲ. ಹೀಗಾಗಿ ಸ್ಟ್ರೀಟ್​ ರ್ಯಾಪರ್​ ಆಗೋದು ಕಷ್ಟವಾದ್ದರಿಂದ ಈ ವೃದ್ಧೆ ಬಸ್​ಗಳಲ್ಲೇ ತಮ್ಮ ಸಂಗೀತ ಸುಧೆಯನ್ನ ಹರಿಸುತ್ತಾರೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...