
ಬ್ರಿಟನ್‌ನ ಅತಿ ದೊಡ್ಡ ಕುಟುಂಬ ಎಂಬ ಖ್ಯಾತಿ ಪಡೆದಿರುವ ರಾಡ್‌ಫರ್ಡ್ಸ್ ಮನೆಯಲ್ಲಿ 22ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಕಳೆದ ವರ್ಷದಂದು ಸು ರಾಡ್‌ಫರ್ಡ್ ಹಾಗೂ ನೋಯೆಲ್ ರಾಡ್‌ಫರ್ಡ್ ದಂಪತಿಗಳು ತಮ್ಮ 22ನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದರು.
ಲಂಕಾಶೈರ್‌ನಲ್ಲಿ ಬೇಕರಿಯೊಂದನ್ನು ಇಟ್ಟುಕೊಂಡಿರುವ ಈ ದಂಪತಿ, ತಮ್ಮ ಮಕ್ಕಳ ನೆರವಿನಿಂದ ಬ್ಯುಸಿನೆಸ್ ನಡೆಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಜೀವಿತಾವಧಿಯ 800 ವಾರಗಳನ್ನು ಗರ್ಭಾವಸ್ಥೆಯಲ್ಲೇ ಕಳೆದಿದ್ದಾರೆ ಸೂ. ಇತ್ತೀಚೆಗೆ ಈ ಕುಟುಂಬದ ಮಗಳಾದ ಮಿಲ್ಲಿ ತನ್ನ ಮಗು ಹುಟ್ಟಿದ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನ ಮುದ್ದಾದ ಪಾದಗಳ ಫೋಟೋವೊಂದನ್ನು ಹಂಚಿಕೊಂಡಿರುವ ಮಿಲ್ಲಿ, “ನಮ್ಮ ಜೀವನದ ದೊಡ್ಡ ಅಧ್ಯಾಯವೊಂದು ಆರಂಭಗೊಂಡಿದೆ,” ಎಂದಿದ್ದಾರೆ.
https://www.instagram.com/p/CFFjn70HrdD/?utm_source=ig_embed