ಬ್ರಿಟನ್ ನ 37 ವರ್ಷದ ತಂದೆಯೊಬ್ಬರು ತಮ್ಮ ಮಗಳ ಪಿಂಕ್ ಬಣ್ಣದ ಪುಟಾಣಿ ಬೈಸಿಕಲ್ ನಲ್ಲಿ ಗ್ಲಾಸ್ಗೋನಿಂದ ಮ್ಯಾಂಚೆಸ್ಟರ್ ವರೆಗೂ ಬೈಸಿಕಲ್ ತುಳಿದುಕೊಂಡು ಹೋಗುವ ಮೂಲಕ ತಾವು ಮಾಡುತ್ತಿರುವ ಸೇವಾರ್ಥವೊಂದಕ್ಕೆ ಹಣ ಸಂಗ್ರಹ ಮಾಡುತ್ತಿದ್ದಾರೆ.
ಇಲ್ಲಿನ ವೈತೆನ್ಶೇವ್ ಎಂಬ ಊರಿನವರಾದ ವೆಸ್ಲೆ ಹ್ಯಾಮ್ನೆಟ್, 379 ಕಿಮೀಗಳಷ್ಟು ದೂರವನ್ನು ಆರು ದಿನಗಳಲ್ಲಿ ಕ್ರಮಿಸಿದ್ದಾರೆ. ತಮ್ಮ ಈ ಗೋಲ್ ಅನ್ನು ಪೂರ್ಣಗೊಳಿಸಿದ ಬಳಿಕ ಜಗತ್ತನ್ನೇ ಗೆದ್ದಂಥ ಅನುಭವ ತಮಗೆ ಆಗಿದ್ದಾಗಿ ಹ್ಯಾಮ್ನೆಟ್ ಹೇಳಿಕೊಂಡಿದ್ದಾರೆ.
ತಮ್ಮ ಈ ಬೈಸಿಕಲ್ ಪಯಣದ ಮೂಲಕ ವೆಸ್ಲೆ ಆನ್ಲೈನ್/ಆಫ್ಲೈನ್ ದೇಣಿಗೆಗಳ ಮೂಲಕ £6,000ಗಳನ್ನು ಸಂಗ್ರಹಿಸಿದ್ದಾರೆ. ಈ ಎಲ್ಲ ಹಣವೂ ಸಹ ವೈಥೆನ್ಶೇವ್ ಬಳಿ ಇರುವ ಆಸ್ಪತ್ರೆಗಳಿಗೆ ಸಂದಾಯವಾಗಲಿದೆ. ಕಳೆದ ವರ್ಷದಂದು ತಮ್ಮ ಅಜ್ಜನನ್ನು ಕಳೆದುಕೊಂಡ ಬಳಿಕ ಇಂಥ ಸೇವಾರ್ಥಗಳಿಗೆ ದುಡ್ಡು ಸಂಗ್ರಹ ಮಾಡುತ್ತಿರುವುದಾಗಿ ವೆಸ್ಲೆ ತಿಳಿಸಿದ್ದಾರೆ.
https://www.facebook.com/wesley.hamnett/posts/10160272346153989