ಅರಬ್ ರಾಷ್ಟ್ರದ ಉದ್ಯಮಿಯೊಬ್ಬರು ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪತ್ನಿಯಂದಿರಿಗೂ ಸಂಬಳವನ್ನ ಘೋಷಣೆ ಮಾಡಿದ್ದಾರೆ.
ಈ ರೀತಿಯ ವಿಶೇಷ ಘೋಷಣೆ ಮಾಡಿದ ಉದ್ಯಮಿಯನ್ನ ಸೋಹನ್ ರಾಯ್ ಎಂದು ಗುರುತಿಸಲಾಗಿದೆ. ಸೋಹನ್ ರಾಯ್ ತನ್ನ ಕಂಪನಿ ಸಿಬ್ಬಂದಿಯ ಪತ್ನಿ ಗೃಹಣಿಯಾಗಿದ್ದರೆ ಅವರಿಗೂ ಸಂಬಳ ನೀಡೋದಾಗಿ ಹೇಳಿದ್ದಾರೆ.
ಏರೀಸ್ ಗ್ರೂಪ್ ಆಫ್ ಕಂಪನೀಸ್ ಮುಖ್ಯಸ್ಥ ರಾಯ್ ಈ ಸಂಬಂಧ ಫೇಸ್ಬುಕ್ನಲ್ಲಿ ಘೋಷಣೆ ಮಾಡಿದ್ದಾರೆ. ಕಂಪನಿಯಲ್ಲಿ ಉದ್ಯೋಗಿಗಳು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ ಅಂದರೆ ಅದರ ಹಿಂದೆ ಮನೆಯಲ್ಲಿರುವ ಗೃಹಿಣಿಯರ ಶ್ರಮವೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
BIG BREAKING NEWS: ಬಡ್ಡಿದರ ಯಥಾಸ್ಥಿತಿ –RBI ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಹೀಗಾಗಿ ಮನೆಯಲ್ಲೇ ಇರುವ ಪತ್ನಿಯಂದಿರಿಗೆ ಸಂಬಳ ನೀಡುವ ಬಗ್ಗೆ ಶೀಘ್ರದಲ್ಲೇ ಸ್ಕೀಮ್ ಒಂದನ್ನ ಪರಿಚಯಿಸಲಿದ್ದೇವೆ. ಕಂಪನಿ ಉದ್ಯೋಗಿಯ ಪತ್ನಿಯಂದಿರ ತ್ಯಾಗ, ಶ್ರಮ, ಬೆಂಬಲ, ಸಮಯ ಇವೆಲ್ಲಕ್ಕೂ ಬೆಲೆ ಕೊಡಬೇಕು. ಹೀಗಾಗಿ ಈ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.