alex Certify ಬೆಚ್ಚಿಬೀಳಿಸುತ್ತೆ ಟ್ವಿಟರ್ ಬಳಕೆದಾರ ಮಾಡಿದ ಸರಣಿ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಟ್ವಿಟರ್ ಬಳಕೆದಾರ ಮಾಡಿದ ಸರಣಿ ಕೊಲೆ

ಟ್ವಿಟರ್​ನಲ್ಲಿ ಜನರನ್ನ ಸಂಪರ್ಕ ಮಾಡಿ ಬಳಿ 9 ಮಂದಿಯನ್ನ ಕೊಲೆ ಮಾಡಿದ್ದ ಅಪರಾಧಿ ತಕಾಹಿರೋ ಶಿರೈಶಿ ಎಂಬ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಜಪಾನ್​​ನಲ್ಲಿ ನಡೆದ ಈ ಪ್ರಕರಣ ವಿಶ್ವಾದ್ಯಂತ ಭಾರೀ ಸುದ್ದಿಯಾಗಿತ್ತು.

ಟೋಕಿಯೋ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ಈ ಟ್ವಿಟರ್​​ ಕೊಲೆಗಾರ ಟೋಕಿಯೋ ಬಳಿಯ ಜಮಾದಲ್ಲಿರುವ ಅಪಾರ್ಟ್​ಮೆಂಟ್​​​ನಲ್ಲಿ ಬಲಿಪಶುಗಳ ಶವವನ್ನ ಚೂರು ಚೂರು ಮಾಡಿ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ. 30 ವರ್ಷದ ಶಿರೈಶಿ ಕೋರ್ಟ್ ಎದುರು ತಪ್ಪೊಪ್ಪಿಕೊಂಡಿದ್ದು ಮರಣದಂಡನೆ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋದಿಲ್ಲ ಎಂದು ಹೇಳಿದ್ದಾನೆ.

2017ರಲ್ಲಿ ಶಿರೈಶಿ ಅಪಾರ್ಟ್​ಮೆಂಟ್​ನಲ್ಲಿದ್ದ ಕೋಲ್ಡ್ ಸ್ಟೋರೇಜ್​ನಲ್ಲಿ 8 ಮಹಿಳೆಯರು ಹಾಗೂ ಒಬ್ಬ ಪುರುಷನ ಶವವನ್ನ ಪತ್ತೆ ಮಾಡಿದ ಬಳಿಕ ಆತನನ್ನ ಪೊಲೀಸರು ಬಂಧಿಸಿದ್ದರು. ಟ್ವಿಟರ್​ನಲ್ಲಿ ಮೂಲಕ  ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಈ ಪಾಪಿ ಅವರನ್ನ ಅಪಾರ್ಟ್​ಮೆಂಟ್​​ಗೆ ಕರೆದು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ.

ಮಾತ್ರವಲ್ಲದೇ ಅವರ ದೇಹದ ಗುರುತು ಸಿಗಬಾರದೆಂದು ತುಂಡು ತುಂಡಾಗಿ ಕತ್ತರಿಸಿ ಕೋಲ್ಡ್ ಸ್ಟೋರೇಜ್​ಗಳಲ್ಲಿ ಶವಗಳನ್ನ ಸಂಗ್ರಹಿಸಿಡುತ್ತಿದ್ದ. ಇನ್ನು ಈತನ ಈ ಕೃತ್ಯ ಅರಿತಿದ್ದ ಕೊಲೆಯಾದ ಮಹಿಳೆಯೊಬ್ಬಳ ಗೆಳೆಯನನ್ನೂ ಈತ ಕೊಲೆ ಮಾಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಬಗ್ಗೆ ಹೆಚ್ಚು ಮಾತನಾಡುವ ಮಹಿಳೆಯರನ್ನೇ ಈತ ಟಾರ್ಗೆಟ್​ ಮಾಡುತ್ತಿದ್ದ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...