ಈ ಗಿನ್ನೆಸ್ ವಿಶ್ವದಾಖಲೆಗಳೇ ಹಾಗೆ. ಚಿತ್ರವಿಚಿತ್ರ ಕಾರಣಗಳು, ನಾವು ಊಹೆಯನ್ನೂ ಮೀರಿದಂಥ ಕಾರಣಗಳಿಗೆಲ್ಲಾ ದಾಖಲೆ ಅಂತ ಹುಟ್ಟಿಕೊಳ್ಳುವುದೇ ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ನೋಡಿ.
ಗ್ಯಾರಿ ಟರ್ನರ್ ಹೆಸರಿನ ಈತನ ಚರ್ಮವನ್ನು ಮೂರಿಂಚಿನಷ್ಟು ಉದ್ದಕ್ಕೆ ಎಳೆಯಬಹುದಾಗಿದೆ. ಸಂಪರ್ಕ ಅಂಗಾಂಶದಲ್ಲಿ ಕಾಣಿಸಿಕೊಂಡ ಲೋಪವೊಂದರ ಕಾರಣ 50 ವರ್ಷದ ಈ ವ್ಯಕ್ತಿಗೆ ಚರ್ಮ, ಅಸ್ಥಿರಜ್ಜು, ಹಾಗೂ ಆಂತರಿಕ ಅಂಗಗಳಲ್ಲಿ ಏರುಪೇರಾಗಿವೆ. ತನ್ನ ಈ ಊನವನ್ನು ಅನುಕೂಲಕ್ಕೆ ಬಳಸಿಕೊಂಡ ಟರ್ನರ್, ಜಗತ್ತಿನಾದ್ಯಂತ ಲಕ್ಷಾಂತರ ಜನರು ಬೆರಗುಗಣ್ಣಿನಿಂದ ತನ್ನತ್ತ ನೋಡುವಂತೆ ಮಾಡಿದ್ದಾನೆ.
ಕೊರೊನಾ ವಾರಿಯರ್ಸ್ ಎಂದು ಹಣೆಪಟ್ಟಿ; ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡದೇ ವಂಚನೆ; ರಾಜ್ಯ ಸರ್ಕಾರದ ವಿರುದ್ಧ ಹೆಚ್ ಡಿ ಕೆ ಆಕ್ರೋಶ
ಎಲರ್ಸ್-ಡಾನ್ಲೋಸ್ ಸಿಂಡ್ರೋಮ್ ಎಂಬ ಈ ವಿಚಿತ್ರ ಸಮಸ್ಯೆಯಿಂದಾಗಿ ಟರ್ನರ್ ತನ್ನ ಚರ್ಮವನ್ನು ನಂಬಲಸಾಧ್ಯವಾದಷ್ಟು ಉದ್ದಕ್ಕೆ ಎಳೆಯಬಲ್ಲರು. ತಮ್ಮ ಕತ್ತಿನ ಚರ್ಮವನ್ನು ಎಳೆದುಕೊಂಡು ಮುಖವನ್ನೇ ಮುಚ್ಚಿಕೊಳ್ಳಬಲ್ಲರು ಟರ್ನರ್.
ಮನೆಯಲ್ಲಿ ಫಟಾಫಟ್ ತಯಾರಿಸಿ ತರಕಾರಿ ಸೂಪ್
ಚರ್ಮಕ್ಕೆ ಬಲ ತುಂಬಿ, ಅದು ಎಷ್ಟುದ್ದ ವಿಸ್ತರಿಸಬಹುದು ಎಂದು ನಿರ್ಧರಿಸುವ ಕೊಲಾಜೆನ್‌ನಲ್ಲಿ ದೋಷವಿದ್ದಲ್ಲಿ ಹೀಗೆ ಆಗುತ್ತದೆ. ಇದರ ಪರಿಣಾಮ ಚರ್ಮ ಹೀಗೆ ಸಡಿಲವಾಗಬಲ್ಲದು.