alex Certify ದಂಗಾಗಿಸುತ್ತೆ ಭಾರತೀಯ ಮೂಲದ 4ರ ಪೋರಿಯ ಐಕ್ಯೂ ಸಾಮರ್ಥ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಭಾರತೀಯ ಮೂಲದ 4ರ ಪೋರಿಯ ಐಕ್ಯೂ ಸಾಮರ್ಥ್ಯ

ಐಕ್ಯೂ ಸಾಮರ್ಥ್ಯವನ್ನ ಅಳೆಯಲು ಇಂಗ್ಲೆಂಡ್​ನಲ್ಲಿ ನಡೆಸಲಾಗುವ ಮೆನ್ಸಾ ಪರೀಕ್ಷೆಯಲ್ಲಿ ಬರ್ಮಿಂಗ್​​ ಹ್ಯಾಮ್​ನ 4 ವರ್ಷದ ಬಾಲಕಿ ಆಲ್ಬರ್ಟ್​ ಐನ್​ಸ್ಟೀನ್​​ರ ಐಕ್ಯೂ ಸಾಮರ್ಥ್ಯದ ಸಮೀಪ ಬರುವ ಮೂಲಕ ಐಕ್ಯೂ ಸ್ಕೋರ್ ಟೆಸ್ಟ್ ಸಂಸ್ಥೆ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾಳೆ.

ಭಾರತೀಯ ಮೂಲದ ನಾಲ್ಕು ವರ್ಷದ ಬಾಲಕಿ ಕೇವಲ ಮೂರು ವರ್ಷ ವಯಸ್ಸಿನಲ್ಲೇ ಈ ಪರೀಕ್ಷೆಯನ್ನ ಎದುರಿಸುವ ಮೂಲಕ 148 ಐಕ್ಯೂ ಸಾಮರ್ಥ್ಯ ಪಡೆದಿದ್ದಾಳೆ.

ಈ ಮೂಲಕ ಐಕ್ಯೂ ಸಾಮರ್ಥ್ಯದಲ್ಲಿ ಆಲ್ಬರ್ಟ್​ ಐನ್​ಸ್ಟೀನ್​ರಿಗಿಂತ ಕೇವಲ 18 ಅಂಕ ಹಿಂದಿದ್ದಾಳೆ. ದಯಾಲ್​ ಕೌರ್​ ಕೇವಲ 2 ವರ್ಷ ವಯಸ್ಸಿನವಳಾಗಿದ್ದಾಗ ನಭೋಮಂಡಲದ ಎಲ್ಲ ಗ್ರಹಗಳನ್ನ ಹೆಸರಿಸುತ್ತಿದ್ದಳು. ನಾಲ್ಕು ವರ್ಷ ವಯಸ್ಸಿನಲ್ಲೇ ಈಕೆಗೆ 5 ನೇ ತರಗತಿ ಮಕ್ಕಳು ಮಾಡುವ ಗಣಿತವನ್ನ ಬಿಡಿಸುವಷ್ಟು ಸಾಮರ್ಥ್ಯವಿದೆ.

ಮೆನ್ಸಾ ಮನಶಾಸ್ತ್ರಜ್ಞರು ನೀಡಿರುವ ಮಾಹಿತಿ ಮೆನ್ಸಾ ಬ್ರಿಟನ್​ನಲ್ಲಿ ಅಗ್ರ 5 ಪ್ರತಿಶತವನ್ನ ಸ್ವೀಕರಿಸುತ್ತೆ. ದಯಾಲ್​​ ಅಗ್ರ 0.01ನೇ ಪ್ರತಿಶತದಲ್ಲಿದ್ದಾಳೆ. ಈಕೆ ಅಗ್ರದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದ್ದಾಳೆ. ಕೇವಲ ಮೂರು ವರ್ಷ ವಯಸ್ಸಿನಲ್ಲಿ ಈಕೆಯ ಐಕ್ಯೂ ಸಾಮರ್ಥ್ಯ 148 ಇದೆ. ಐನ್​ಸ್ಟೀನ್​ನ ಐಕ್ಯೂ ಸಾಮರ್ಥ್ಯ 160 ಇತ್ತು. ಐನ್​ಸ್ಟೀನ್​​ ಐಕ್ಯೂ ಸಾಮರ್ಥ್ಯ ಅಳೆಯುವಾಗ ಅವರಿಗೆ ಎಷ್ಟು ವರ್ಷವಾಗಿತ್ತು ಅನ್ನೋದ್ರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ದಯಾಲ್ ತಂದೆ ಸರಬ್​ಜೀತ್​ ಹೇಳಿದ್ರು.

ಮಗಳ ಐಕ್ಯೂ ಸಾಮರ್ಥ್ಯ ಇಷ್ಟು ಚೆನ್ನಾಗಿ ಇರೋದ್ರಿಂದ ಆಕೆಯನ್ನ ಉನ್ನತ ತರಗತಿಗೆ ಸೇರಿಸಬೇಕು. ಈ ರೀತಿ ಮಾಡಿದ್ರೆ ಆಕೆಗೆ ಕಠಿಣ ಸಾಮರ್ಥ್ಯವನ್ನ ಎದುರಿಸೋದು ಸಾಧ್ಯವಾಗುತ್ತೆ ಎಂದು ಮನವಿ ಮಾಡಿದ್ದಾರೆ.

ದಯಾಲ್​ ಮುಂದಿನ ದಿನಗಳ ವಿಶ್ವಕ್ಕೇ ನಾಯಕಿ ಆಗಬಹುದು. ನೊಬೆಲ್ ಪ್ರಶಸ್ತಿಯನ್ನ ಗೆಲ್ಲಬಹುದು. ಅಥವಾ ಕಾಫಿ ಶಾಪ್​ನಲ್ಲಿ ಕಾಫಿಯನ್ನೂ ಮಾರಬಹುದು. ಅಥವಾ ಆಕೆಯ ಕನಸಿನ ಕೆಲಸಕ್ಕೆ ಸೇರಬಹುದು. ಆಕೆಗೆ ಇಷ್ಟವಾದ ಹಾಗೆ ಆಕೆ ತನ್ನ ಭವಿಷ್ಯ ಆರಿಸಿಕೊಳ್ಳಲಿ ಎಂದು ತಂದೆ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...