ಕಾರ್ಡ್‌ಗಳನ್ನು ಬಳಸಿ ಆಡುವ ಬ್ರಿಡ್ಜ್ ಗೇಮ್ ನಲ್ಲಿ ಗೆಲ್ಲಲು ಸಾಕಷ್ಟು ಚುರುಕುಮತಿ ಬುದ್ಧಿ, ಸ್ಮರಣ ಶಕ್ತಿ ಹಾಗೂ ತಂತ್ರಗಾರಿಕೆಗಳ ಅಗತ್ಯವಿದೆ. ಈ ಆಟದಲ್ಲಿ ಪಾರಂಗತರಾಗಲು ಸಾಕಷ್ಟು ಅನುಭವ ಬೇಕು, ಸಾಮಾನ್ಯವಾಗಿ ಯುವಕರಿಂದಲೂ ಈ ಆಟದ ಮೇಲೆ ಮಾಸ್ಟರಿ ಸಾಧಿಸುವುದು ಕಷ್ಟಕಷ್ಟ.
ಇಂಥದ್ದರಲ್ಲಿ ಕ್ಯಾಲಿಫೋರ್ನಿಯಾದ ಆಂಡ್ರ‍್ಯೂ ಚಿನ್ ಹೆಸರಿನ 8 ವರ್ಷದ ಬಾಲಕನೊಬ್ಬ ಜಗತ್ತಿನ ಅತ್ಯಂತ ಕಿರಿಯ ಕಾರ್ಡ್ ಗೇಮ್ ’ಲೈಫ್ ಮಾಸ್ಟರ್’ ಎಂಬ ಶ್ರೇಯಕ್ಕೆ ಪಾತ್ರನಾಗಿದ್ದಾನೆ.
ಸಾಮಾನ್ಯವಾಗಿ ಈ ಆಟದಲ್ಲಿ 500 ಮೆಟಾ ಪಾಯಿಂಟ್‌ಗಳನ್ನು ಕಲೆ ಹಾಕಲು ದಶಕಗಳ ಪರಿಶ್ರಮ ಬೇಕಾಗುತ್ತದೆ. ಆದರೆ ಈ ಬಾಲಕ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಸಿಕ್ಕಾಪಟ್ಟೆ ಆನ್ಲೈನ್ ಗೇಮ್‌ಗಳಲ್ಲಿ ಭಾಗವಹಿಸಿದ್ದಲ್ಲದೇ, ಸ್ಥಳೀಯವಾಗಿಯೂ ಸಾಕಷ್ಟು ಆಟವಾಡುವ ಮೂಲಕ ಇಷ್ಟು ಪಾಯಿಂಟ್‌ಗಳನ್ನ ಸಂಗ್ರಹಿಸಿದ್ದಾನೆ.