ಲಂಡನ್: ಕೊರೋನಾ ಸೇನಾನಿಯೊಬ್ಬರು ಒಂಭತ್ತು ವಾರದ ಬಳಿಕ ತಮ್ಮ ಮಕ್ಕಳನ್ನು ಭೇಟಿಯಾದ ಸಂದರ್ಭದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ.
ಇಂಗ್ಲೆಂಡ್ ನ 43 ವರ್ಷದ ಮಹಿಳೆ ಸುಜುಕಿ ವೌಘಾನ್ ಎಂಬುವವರು ಅಲ್ಲಿನ ರಾಷ್ಟ್ರೀಯ ವೈದ್ಯಕೀಯ ಸೇವಾ ವಿಭಾಗದ ನೌಕರರಾಗಿದ್ದಾರೆ.
ನಿರಂತರ ಕರ್ತವ್ಯ ನಿರ್ವಹಿಸಿ ಐಸೋಲೇಶನ್ ನಲ್ಲಿ ಇದ್ದು ಬಂದ ಅವರನ್ನು ನೋಡಿದ ಹೇಟಿಲ್ ಎಂಬ ಏಳು ವರ್ಷದ, ಬೆಲ್ಲಾ ಎಂಬ ಒಂಭತ್ತು ವರ್ಷದ ಮಕ್ಕಳು ಕಣ್ಣೀರಿಡುತ್ತ ಅಪ್ಪಿಕೊಳ್ಳುವ ದೃಶ್ಯವನ್ನು ನಾರ್ಪೊಕ್ ನಿವಾಸಿಗಳು ವಿಡಿಯೋ ಮಾಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಆಕೆಯ ಸಹೋದರಿ ಚಾರ್ಲೆಟ್ ಅವರ ಜತೆ ಎರಡು ತಿಂಗಳಿಂದ ಇದ್ದರು ಎನ್ನಲಾಗಿದೆ. ಟ್ವಿಟರ್ ನಲ್ಲಿ ವಿಡಿಯೋವನ್ನು 1.7 ಮಿಲಿಯನ್ ಜನ ವೀಕ್ಷಿಸಿದ್ದಾರೆ.