ಕೋವಿಡ್-19 ಲಾಕ್‌ಡೌನ್ ನಡುವೆ ತಮ್ಮ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡುವ ವಿಧಾನಗಳಲ್ಲಿ ಭಾರೀ ಬದಲಾವಣೆಗಳನ್ನು ಬ್ರಿಟನ್‌ನ ರೆಸ್ಟೋರೆಂಟ್‌ಗಳು ತಂದುಕೊಂಡಿವೆ.
ಮೈಕೆಲಿನ್ ಖ್ಯಾತಿಯ ಲಂಡನ್‌ನ ಕಿಚನ್ ಟೇಬಲ್ ರೆಸ್ಟೋರೆಂಟ್ ಶೆಫ್ ಕಮ್ ಮಾಲೀಕರಾದ ಜೇಮ್ಸ್ ನಾಪೆಟ್ ಇದೀಗ ಸ್ವಸಹಾಯ ಮೀಲ್ಸ್ ಎಂಬ ಹೊಸ ಕಲ್ಪನೆಯೊಂದನ್ನು ತಂದಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ಅಡುಗೆ ಮನೆಯ ಅಕ್ಕಪಕ್ಕದಲ್ಲೇ ಸೀಟಿಂಗ್ ಇರುವ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಭಾರೀ ಕಷ್ಟಕರ.
ಆದ್ದ ಕಾರಣ, ಇಬ್ಬರಿಗೆ ಸರ್ವ್ ಮಾಡಬಲ್ಲ ಮೀಲ್ ಕಿಟ್‌ಗಳನ್ನು ಈ ರೆಸ್ಟೋರಂಟ್ ತಂದಿದೆ. 150-250 ಪೌಂಡ್‌ಗಳಷ್ಟು ಖರ್ಚಾಗುವ ಈ ಕಿಟ್‌ಗಳಲ್ಲಿ ಆರ್ಡರ್ ಮಾಡುವ ವ್ಯಕ್ತಿಗೆ ಇಷ್ಟವಾಗುವ ಪದಾರ್ಥಗಳನ್ನು ತುಂಬಿ, ಅದರಲ್ಲಿ ಅಡುಗೆ ಮಾಡುವ ಸೂಚನೆಗಳನ್ನು ನೀಡಲಾಗುತ್ತದೆ.
ಕೊರಿಯರ್‌ಗಳ ಸಹಾಯದಿಂದ ಈ ರೆಸ್ಟೋರೆಂಟ್ ಪ್ರತಿನಿತ್ಯ 1000 ಊಟದ ಕಿಟ್‌ಗಳನ್ನು ಡೆಲಿವರಿ ಮಾಡುತ್ತಿದೆ. ಕೋವಿಡ್‌ಗೆ ಲಸಿಕೆ ಕಂಡುಹಿಡಿದ ಮೇಲೂ ಸಹ ಈ ಹೋಂ ಡೆಲಿವರಿ ವ್ಯವಸ್ಥೆ ಮುಂದುವರೆಯಲಿದೆ ಎನ್ನುತ್ತಾರೆ ಜೇಮ್ಸ್.