ಕರೊನಾ ವೈರಸ್ನಿಂದಾಗಿ ಎರಡು ಬಾರಿ ಮದುವೆ ಮುಂದೂಡಿಕೆ ಮಾಡಿಕೊಂಡಿದ್ದ ಸ್ಕಾಟ್ಲೆಂಡ್ನ ಜೋಡಿಯೊಂದು ಮೆಕ್ಡೊನಾಲ್ಡ್ನಲ್ಲಿ ಮದುವೆ ಆಗಲು ನಿರ್ಧಾರ ಮಾಡಿವೆ.
ಕರೊನಾ ವೈರಸ್ ಸಂಕಷ್ಟದಿಂದಾಗಿ ಕಳೆದ 12 ವಾರಗಳಲ್ಲಿ ಮೆಲಿಸ್ಸಾ ರಸ್ಸೆಲ್ ಹಾಗೂ ಶಾನಿನ್ ಮೆಕೆನ್ನಾ ವಿವಾಹ 2 ಬಾರಿ ರದ್ದುಗೊಂಡಿದೆ. ಆದರೆ ಮೆಲಿಸ್ಸಾ ತಂದೆ ಆರೋಗ್ಯ ಹದಗೆಡ್ತಾ ಇರುವ ಹಿನ್ನೆಲೆ ಈ ಜೋಡಿ ಮೆಕ್ಡೊನಾಲ್ಡ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ.
ವಿವಾಹದ ಬಳಿಕ ಮುಂದಿನ ಕಾರ್ಯಕ್ರಮಗಳು ಚಟೆಲ್ಹೆರಾಲ್ಟ್ ಕಂಟ್ರಿ ಪಾರ್ಕ್ನಲ್ಲಿ ನಡೆಯಲಿದೆ. ಆದರೆ ಮದುವೆ ಸಮಾರಂಭವನ್ನ ಮೆಕ್ಡಿ ನಲ್ಲೇ ನಡೆಸಲಾಗುತ್ತೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮೆಲಿಸ್ಸಾ, ನಾನು ಕಳೆದ 6 ವರ್ಷಗಳಿಂದ ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನನ್ನ ಅನೇಕ ಸಂಭ್ರಮದ ಕ್ಷಣಗಳನ್ನ ಕಳೆದಿದ್ದೇನೆ. ಇದೀಗ ನನ್ನ ಪ್ರೀತಿಪಾತ್ರರ ಎದುರು ಮದುವೆ ಆಗಲು ಉತ್ಸುಕನಾಗಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ.
ಮೆಲಿಸ್ಸಾ ಹಾಗೂ ಶಾನನ್ ಮದುವೆಗೆ ಅತಿಥಿಯಾಗಿ ಬಂದವರಿಗೆ ಬಿಗ್ ಮಾಕಾ, ಮೊಝರೆಲ್ಲಾ ಡಿಪ್ಸ್ ಹಾಗೂ ಐಸ್ಕ್ರೀಂ ನೀಡಲು ನಿರ್ಧರಿಸಲಾಗಿದೆ.