ಫ್ಲೋರಿಡಾದಲ್ಲಿರುವ ಪ್ರಖ್ಯಾತ ಫುಡ್ ಚೈನ್ಗಳಲ್ಲಿ ಒಂದಾದ ಮೆಕ್ಡೊನಾಲ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗ್ತಿದೆ. ಸಂದರ್ಶನಕ್ಕೆ ಹಾಜರಾಗುವ ಪ್ರತಿಯೊಬ್ಬ ವ್ಯಕ್ತಿ ಪಾಸ್ ಆಗಲಿ ಇಲ್ಲವೇ ಫೇಲ್ ಆಗಲಿ ಅವರಿಗೆ 50 ಡಾಲರ್ ಹಣವನ್ನ ನೀಡುತ್ತಿದೆ.
ಡ್ಯಾನ್ ನನ್ ಎಂಬ ಹೆಸರಿನ ವ್ಯಕ್ತಿ ಟ್ವಿಟರ್ನಲ್ಲಿ ಮೆಕ್ಡೊನಾಲ್ಡ್ನ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಎಂ ಎಫ್ 2 ಪಿಎಂ. ಸಂದರ್ಶನದಲ್ಲಿ ಭಾಗಿಯಾಗಿ 50 ಡಾಲರ್ ಗಳಿಸಿ ಎಂದು ಬರೆಯಲಾಗಿದೆ.
ತಡರಾತ್ರಿ ದುರಂತ: ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು –ಕೋಲಾರ ಆಸ್ಪತ್ರೆಯಲ್ಲಿ ಘಟನೆ, ಸಂಬಂಧಿಕರ ಆರೋಪ
ಈ ರೀತಿ ಸಂದರ್ಶನಕ್ಕೆ ಭಾಗಿಯಾದವರಿಗೆ ಹಣ ಸಿಗುತ್ತಿರೋದು ಸಂಪೂರ್ಣ ಹೊಸ ವಿಷಯವಾಗಿದೆ. ಆದರೆ ಉತ್ತಮ ಉದ್ಯೋಗಿಗಳನ್ನ ಆಕರ್ಷಿಸುವ ಸಲುವಾಗಿ ರೆಸ್ಟಾರೆಂಟ್ ಈ ವಿಶೇಷ ಆಫರ್ ನೀಡಿದೆ.
ಕೋವಿಡ್ 19 ನಿಂದಾಗಿ ಸಂಪೂರ್ಣ ಸ್ತಬ್ಧವಾಗಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಉದ್ಯಮಗಳು ಚಿಗುರಿಕೊಳ್ತಿದೆ. ಈಗಾಗಲೇ ಬಹುತೇಕ ಕಡೆ ಉದ್ಯೋಗಿಗಳ ಅವಶ್ಯಕತೆ ಇದೆ. ಆದರೆ ಈ ಕೆಲಸಗಳಿಗೆ ಜನರನ್ನ ನೇಮಿಸಿಕೊಳ್ಳಲು ಕಂಪನಿಗಳು ಹೆಣಗಾಡುತ್ತಿವೆ.